ಬೆಂಗಳೂರು, ಸೆ. 03 (DaijiworldNews/AA): ಸ್ಯಾಂಡಲ್ವುಡ್ನ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ವಿಚ್ಛೇದನವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಮಂಜೂರು ಮಾಡಿದೆ.

ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನಾ ಅವರಿಗೆ ನ್ಯಾ. ಡಿಕೆ ಸಿಂಗ್ ಹಾಗು ಶಾಂತಿಭೂಷಣ್ ಅವರ ವಿಭಾಗೀಯ ಪೀಠ ವಿಚ್ಛೇದನ ಮಂಜೂರು ಮಾಡಿದೆ. ಜೊತೆಗೆ ಪತ್ನಿಗೆ 2 ಕೋಟಿ ರೂ. ಜೀವನಾಂಶ ನೀಡಲು ಆದೇಶ ಹೊರಡಿಸಿದೆ.
ಮುಂದಿನ ಮೂರು ತಿಂಗಳ ಒಳಗೆ ಒನ್ಟೈಮ್ ಸೆಟಲ್ಮೆಂಟ್ ಆಗಿ ನಾಗರತ್ನ ಅವರಿಗೆ ಜೀವಾಂಶ ನೀಡಬೇಕು. ಹಾಗೂ ಮೂರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನ ದುನಿಯಾ ವಿಜಯ್ ಅವರೇ ಹೊರಬೇಕು ಎಂದು ಕೋರ್ಟ್ ತಿಳಿಸಿದೆ.