ಬೆಂಗಳೂರು,ಆ. 20 (DaijiworldNews/AK): ಟಾಕ್ಸಿಕ್’ ಸಿನಿಮಾ ವಿದೇಶದಲ್ಲಿ ಕೂಡ ಒಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ (ಆಗಸ್ಟ್ 21) ಈ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಲಿದೆ.

ಕನ್ನಡ ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾದ ಆಗಮನವನ್ನುಕಾತುರದಿಂದ ನೋಡುತ್ತಿದೆ. ಚಿತ್ರವನ್ನು ಸ್ವಾಗತಿಸಲು ಸಾಕಷ್ಟು ಕಟೌಟ್ಗಳು ಸಿದ್ಧವಾಗಿವೆ.
ಹೊರ ರಾಜ್ಯಗಳಲ್ಲಿ ಕೂಡ ಟಾಕ್ಸಿಕ್ ದೊಡ್ಡ ಕ್ರೇಜ್ ಶುರು ಆಗಿದೆ. ಆಗಸ್ಟ್ 26ರಂದು ಅದ್ದೂರಿಯಾಗಿ ಈ ಸಿನಿಮಾ ತೆರೆಕಾಣಲಿದೆ. ಅಂದಾಜು 10 ಸಾವಿರ ಪರದೆಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣಲಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾಗೆ ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.