ಮುಂಬೈ, ಆ. 19 (DaijiworldNews/AK): ಧುರಂಧರ್’ ಸಿನಿಮಾದ ‘ಶರಾರತ್’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ರಣವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ ತಮ್ಮ ಗ್ಲಾಮರಸ್ ನೃತ್ಯದಿಂದ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿ, ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ.
ಆಯೇಷಾ ಖಾನ್ ಇತ್ತೀಚೆಗೆ ರಹಸ್ಯ ವ್ಯಕ್ತಿಯ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಆಯೇಷಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂದು ಮಾತಾನಾಡುತ್ತಿದ್ದಾರೆ. ಆದರೆ ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ.ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ನ ಫೋಟೋಶೂಟ್ ಆಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ಎಲ್ಲ ಕಡೆಗಳಲ್ಲಿ ಸುದ್ದಿ ಆಗುತ್ತಿರುವುದಂತೂ ಸತ್ಯ.
‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನಲ್ಲಿ ಕೃಸ್ಟಲ್ ಡಿಸೋಜಾ ಜೊತೆ ಆಯೇಷಾ ಹೆಜ್ಜೆ ಹಾಕಿದ್ದರು.