ಮುಂಬೈ, ಜು. 17 (DaijiworldNews/AA): 33 ಇಡಿಯಟ್ಸ್ ಸಿನಿಮಾಗೂ ಸೋನಂ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ ಎಂದು ಬಾಲಿವುಡ್ ನಟ ಅಮೀರ್ ಖಾನ್ ತಿಳಿಸಿದ್ದಾರೆ.

ಅಮೀರ್ ಖಾನ್, ಮಾಧವನ್, ಶರ್ಮನ್ ಜೋಶಿ, ಕರೀನಾ ನಟಿಸಿ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ '3 ಇಡಿಯಟ್ಸ್' ಸಿನಿಮಾವು ಭಾರತದ ಹೆಮ್ಮೆಯ ವಿಜ್ಞಾನಿ ಮತ್ತು ಈಗ ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಈ ಬಗ್ಗೆ ಹಲವಾರು ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಈ ಕುರಿತು ಇದೀಗ ಸಿನಿಮಾದ ನಾಯಕ ನಟ ಅಮೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
"3 ಇಡಿಯಟ್ಸ್ ಸಿನಿಮಾದ ರಾಂಚೋ ಪಾತ್ರಕ್ಕೆ ಸೋನಮ್ ವಾಂಗ್ಚುಕ್ ಅವರ ಜೀವನ ಸ್ಫೂರ್ತಿ ಎಂಬುದು ನಿಜವಲ್ಲ. ಅದು ತಪ್ಪು ಕಲ್ಪನೆ. ನಾವು 3 ಇಡಿಯಟ್ಸ್ ಚಿತ್ರವನ್ನು ಮಾಡುತ್ತಿದ್ದಾಗ ಸೋನಮ್ ಅವರ ಬಗ್ಗೆ ನಮಗೆ ತಿಳಿದಿರಲಿಲ್ಲ. ನಾನು ಇತ್ತೀಚೆಗೆ ಚತುರ್ (ನಟ ಓಮಿ ವೈದ್ಯ) ಅವರ ವಿಡಿಯೋವನ್ನು ನೋಡಿದೆ, ಅವರು ಕೂಡ ಹಾಗೆಯೇ ಹೇಳಿದ್ದಾರೆ. ಆದರೆ ಅವರದ್ದು ತಪ್ಪು ಮಾಹಿತಿ. ರಾಜಕುಮಾರ್ ಹಿರಾನಿ ಅಥವಾ ಅಭಿಜತ್ ಜೋಶಿ ಯಾರಿಗೂ ಸೋನಮ್ ಅವರ ಬಗ್ಗೆ ತಿಳಿದಿರಲಿಲ್ಲ" ಎಂದಿದ್ದಾರೆ.
ಮುಂದುವರೆದು, "ಸೋನಮ್ ಅವರು ಮಾಡುತ್ತಿರುವ ಕೆಲಸ ಒಳ್ಳೆಯದು. ಅವರನ್ನು ಗೌರವಿಸಲು ಅವರು 3 ಇಡಿಯಟ್ಸ್ ಚಿತ್ರದ ಪಾತ್ರದ ಮೇಲೆ ಆಧಾರಿತರಾಗಿರಬೇಕು ಎಂದೇನೂ ಇಲ್ಲ. ವಾಸ್ತವಿಕ ದೃಷ್ಟಿಕೋನದಿಂದ ನಾನು ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾವೆಲ್ಲರೂ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ತುಂಬಾ ಕಳವಳ ಹೊಂದಿದ್ದೇವೆ. ಎಲ್ಲವೂ ಸುಖಾಂತ್ಯವಾಗಬೇಕೆಂದು ನಾವು ಆಶಿಸುತ್ತೇವೆ. ಅವರೆಲ್ಲರು ಉಪವಾಸವನ್ನು ಕೈಬಿಡುತ್ತಾರೆ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ" ಎಂದು ಹೇಳಿದರು.