ಮುಂಬೈ, ಮೇ. 28 (DaijiworldNews/AK): ಬಾಲಿವುಡ್ನ ವಿವಾದಾತ್ಮಕ ಹಾಗೂ ಪ್ರತಿಭಾವಂತ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಹೊಸ ಸಿನಿಮಾ ‘ಭಾರತ್ ಭಾಗ್ಯ ವಿಧಾತಾ’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

ಮೇ 28 ರಂದು ಈ ಚಿತ್ರದಲ್ಲಿನ ತಮ್ಮ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕಂಗನಾ ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಅವರು ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂಸಾಚಾರದ ನಡುವೆಯೂ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಒಟ್ಟಾಗಿ ನಿಲ್ಲುವ ಕಥಾಹಂದರವನ್ನು ಈ ಪೋಸ್ಟರ್ ಸೂಚಿಸುತ್ತಿದೆ.
ಮೋಷನ್ ಪೋಸ್ಟರ್ ಮೂಲಕ ಕಂಗನಾ ಅವರು ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಮುಖದ ಮೇಲೆ ಗಾಯದ ಗುರುತುಗಳು ಹಾಗೂ ಕೆನ್ನೆಯ ಮೇಲೆ ರಕ್ತದ ಕಲೆಗಳೊಂದಿಗೆ, ಉರಿಯುತ್ತಿರುವ ಬೆಂಕಿಯ ನಡುವೆ ಕಂಗನಾ ನಡೆದು ಬರುತ್ತಿರುವುದನ್ನು ಇದರಲ್ಲಿ ಕಾಣಬಹುದು. ನರ್ಸ್ ಸಮಸ್ತ್ರ ಧರಿಸಿರುವ ಕಂಗನಾ, ರೋಗಿಯೊಬ್ಬರಿಗೆ ಸಹಾಯ ಮಾಡುತ್ತಿರುವಂತೆ ಪೋಸ್ಟರ್ ವಿನ್ಯಾಸಗೊಳಿಸಲಾಗಿದೆ.
ಈ ಹಿಂದೆ ಚಿತ್ರತಂಡವು ಮೊದಲ ಪೋಸ್ಟರ್ ಬಿಡುಗಡೆ ಮಾಡಿ, ಜೂನ್ 12ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಘೋಷಿಸಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಪೈಪೋಟಿ ಜೋರಾಗಲಿದೆ.