ಮಡಿಕೇರಿ,ಏ. 10 (DaijiworldNews/AK): ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ಹೈದರಾಬಾದ್ನಲ್ಲಿಅರಕ್ಷತೆ ನಡೆಯಿತು. ಈಗ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಅಗಮಿಸಿ ಪತಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಕೊಡಗನ್ನು ಸುತ್ತಿದ್ದಾರೆ.

ಆ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಬರ್ತ್ಡೇ ಸಂದರ್ಭದಲ್ಲೇ ರಶ್ಮಿಕಾ ಕೊಡಗಿಗೆ ಬಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಂಗಿ ಜೊತೆ ಸ್ಕೂಲ್ ಎದುರು ಪೋಸ್ ಕೊಟ್ಟಿದ್ದಾರೆ. ಅದರ ಫೋಟೋನ ರಶ್ಮಿಕಾ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರೀತಿಸಿ ಮದುವೆ ಆದವರು. ಇಬ್ಬರೂ ಪ್ರೀತಿಯಲ್ಲಿ ಇದ್ದಾಗ ವಿಜಯ್ ಅವರು ಕೊಡಗಿಗೆ ಬಂದಿದ್ದರೇ ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿದೆ. ರಶ್ಮಿಕಾ ಅವರು ಫ್ಯಾಮಿಲಿ ಜೊತೆ ಸಮಯ ಕಳೆದಿದ್ದಾರೆ. ಅವರು ಸಿನಿಮಾದಲ್ಲಿ ಬ್ಯುಸಿ ಇರುವುದರಿಂದ ಕೊಡಗಿಗೆ ಬರುವುದಕ್ಕೆ ಹೆಚ್ಚು ಸಮಯ ಸಿಗೋದಿಲ್ಲ.