ಮಡಿಕೇರಿ, ಏ. 07 (DaijiworldNews/TA): ಸ್ಯಾಂಡಲ್ವುಡ್ನಿಂದ ಆರಂಭಿಸಿ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಈ ವರ್ಷದ ಹುಟ್ಟುಹಬ್ಬ ವಿಶೇಷ ಕ್ಷಣಗಳೊಂದಿಗೆ ಮರೆಯಲಾಗದ ನೆನಪಾಗಿ ಉಳಿದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯ ಸ್ರನಿಟಿ ಕನ್ವೆನ್ಷನ್ ಹಾಲ್ನಲ್ಲಿ ಅದ್ಧೂರಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿದ್ದು, ಕುಟುಂಬಸ್ಥರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಂಭ್ರಮ ಜೋರಾಗಿತ್ತು. ಈ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದಕ್ಕೂ ಮೊದಲು ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದನಾಮತ್ತು ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಹೈದರಾಬಾದ್ನಲ್ಲಿ ಭವ್ಯ ಆರತಕ್ಷತೆ ಕೂಡ ನೆರವೇರಿತ್ತು.
ಮದುವೆಯ ನಂತರ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ ಈ ಜೋಡಿ, ಹುಟ್ಟುಹಬ್ಬದ ಜೊತೆಗೆ ಸಾಂಪ್ರದಾಯಿಕ ಆರತಕ್ಷತೆಯ ಸಂಭ್ರಮವನ್ನೂ ಇದೇ ವೇಳೆ ಆಚರಿಸಿಕೊಂಡರು. ಆಪ್ತರಿಗೆ ಮಾತ್ರ ಆಹ್ವಾನ ನೀಡಿ ಕಾರ್ಯಕ್ರಮ ಸರಳವಾದರೂ ಭರ್ಜರಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಂದೆ ಮದನ್ ಮಂದಣ್ಣ ಅಮೂಲ್ಯ ಉಡುಗೊರೆಯಾಗಿ ಕೊಡಗಿನಲ್ಲಿ ಅದ್ದೂರಿ ಬಂಗಲೆ ಒದಗಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ ಕೊಡಗಿನ ಸಾಂಪ್ರದಾಯಿಕ ಕೊಡವ ಶೈಲಿಯ ಸೀರೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದರು. ಕುಟುಂಬ ಮತ್ತು ಆಪ್ತರ ನಡುವೆ ನಡೆದ ಈ ಸಂಭ್ರಮ ಭರಿತ ಕ್ಷಣಗಳು ಅವರ ಅಭಿಮಾನಿಗಳಿಗೆ ವಿಶೇಷವಾಗಿವೆ.