ಮುಂಬೈ, ಫೆ. 21 (DaijiworldNews/AA): ನಾನು ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲೂ ಆ್ಯಕ್ಟೀವ್ ಆಗಿದ್ದೇನೆ. ಎರಡೂ ಕಡೆ ಕೆಲಸ ಮಾಡಲು ನನಗೆ ಇಷ್ಟ ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

"ನಾನು ಬಾಲಿವುಡ್ ಬಿಡಲು ಎಂದಿಗೂ ಬಯಸಿರಲಿಲ್ಲ. ನಾನು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಅದಕ್ಕೆ ಸಾಕಷ್ಟು ಲಿಮಿಟೇಷನ್ ಇದೆ ಎನಿಸಿತು. ನಾನು ಏಳ್ಗೆ ಕಾಣಲು ಬಯಸಿದ್ದೆ. ಕಲಾವಿದನಾಗಿ ಅವಕಾಶಗಳನ್ನು ಹುಡುಕಲು ನನ್ನ ಮೇಲೆ ಒತ್ತಡವಿತ್ತು. ನಾನು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ" ಎಂದು ಹೇಳಿದರು.
"ನಮ್ಮ ಭಾರತೀಯ ಚಲನಚಿತ್ರಗಳು ನನಗೆ ತುಂಬಾ ಇಷ್ಟ. ವಾರಣಾಸಿ ಚಿತ್ರದ ಮೂಲಕ ಭಾರತಕ್ಕೆ ಮರಳುತ್ತಿದ್ದೇನೆ. ಈ ಬಗ್ಗೆ ನನಗೆ ತುಂಬಾ ಸಂತೋಷ ಇದೆ. ನಾನು ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿಲ್ಲ. ನಾನು ಎಂದಿಗೂ ಆಯ್ಕೆ ಮಾಡಿಲ್ಲ. ಎರಡೂ ಸ್ಥಳಗಳಲ್ಲಿ ಕೆಲಸ ಮಾಡೋದು ಎಂದರೆ ಖುಷಿ" ಎಂದಿದ್ದಾರೆ.