ಉಡುಪಿ, ಫೆ. 19 (DaijiworldNews/TA): ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಖ್ಯಾತ ಚಿತ್ರ ನಟಿ ಭಾರತಿ ವಿಷ್ಣುವರ್ಧನ್ ಇವರು ಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಭೇಟಿ ಮಾಡಿ ಫಲ ಮಂತ್ರಾಕ್ಷತೆಯನ್ನು ಪಡೆದುಕೊಂಡರು.


ನಂತರ ಕೃಷ್ಣ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು. ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರೋದ್ಯಮದ ಪ್ರಖ್ಯಾತ ಬಹುಭಾಷಾ ಕಲಾವಿದೆ. ಕನ್ನಡ ಚಿತ್ರರಂಗದಲ್ಲಿ 'ಗಂಗೆಗೌರಿ', 'ನಮ್ಮ ಸಂಸಾರ', 'ಮೇಯರ್ ಮುತ್ತಣ್ಣ', 'ಬಾಳು ಬೆಳಗಿತು', 'ಮಿಸ್ ಬೆಂಗಳೂರು', 'ಹೃದಯ ಸಂಗಮ', 'ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ', 'ಕುಲ ಗೌರವ', 'ದುಡ್ಡೆ ದೊಡ್ಡಪ್ಪ', 'ಬಾಲವ ಜೋಡಿ', 'ಬಾಲವ ಜೋಡಿ,' 'ತಂಡದ ಜೋಡಿ, 'ಸ್ವಯಂವರ', 'ಶ್ರೀಕೃಷ್ಣದೇವರಾಯ', 'ಬಂಗಾರದ ಮನುಷ್ಯ', 'ದುರದ ಬೆಟ್ಟ', 'ಬಿಡುಗಡೆ', 'ದೇವರಗುಡಿ', 'ನಾಗರಹೊಳೆ', 'ಭಾಗ್ಯಜ್ಯೋತಿ', 'ಬಂಗಾರದ', 'ಬಂಗಾರ' ಚಿತ್ರಗಳಲ್ಲಿ 'ಋಣಮುಕ್ತಳು' ಚಿತ್ರಗಳ ವಿವಿಧ ಪಾತ್ರಗಳಿಂದ ಗುರುತಿಸಿಕೊಂಡವರು.