ಮುಂಬೈ, ಫೆ. 18 (DaijiworldNews/AK): ಸಲ್ಮಾನ್ ಖಾನ್ ಬಾಲಿವುಡ್ನ ಸ್ಟಾರ್ ನಟ ಹಲವು ದಶಕಗಳ ಕಾಲ ಬಾಲಿವುಡ್ ಸ್ಟಾರ್ ನಟನಾಗಿ ಉಳಿದಿರುವ ಸಲ್ಮಾನ್ ಖಾನ್ ಒಂದು ಸಮಯದಲ್ಲಿ ಯುವತಿಯರ ಫೇವರೇಟ್ ನಟರಾಗಿದ್ದರು.

ಸಲ್ಮಾನ್ ಖಾನ್ ಅವರ ಹೆಸರು ಹಲವಾರು ನಟಿಯರೊಟ್ಟಿಗೆ ಕೇಳಿ ಬಂದಿದೆ. ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಒಬ್ಬಿಬ್ಬರಲ್ಲ. ಆದರೆ ಯಾರನ್ನೂ ಅವರು ಮದುವೆ ಆಗಿಲ್ಲ. ಈಗಲೂ ಸಹ ಸಲ್ಮಾನ್ ಖಾನ್ ಸಿಂಗಲ್. ಆದರೆ ಸಲ್ಮಾನ್ ಖಾನ್ ಏಕೆ ಮದುವೆ ಆಗಲಿಲ್ಲ, ಅವರ ಪ್ರೇಮಪ್ರಸಂಗಗಳು ಅರ್ಧದಲ್ಲೇ ಏಕೆ ನಿಂತು ಹೋದವು ಎಂಬ ಬಗ್ಗೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಭಿನ್ನ ಮನಸ್ಥಿತಿಯ ಬಗ್ಗೆ ಮಾತನಾಡಿದ್ದ ಸಲೀಂ ಖಾನ್, , ಆತನಿಗೆ ತನ್ನ ತಾಯಿಯ ಮೇಲೆ ವಿಪರೀಪ ಪ್ರೀತಿ. ತಾನು ಪ್ರೀತಿಸುವ ಯುವತಿಯರಲ್ಲಿ ತನ್ನ ತಾಯಿಯನ್ನು ಕಾಣಲು ತವಕಿಸುತ್ತಿದ್ದ. ಸಲ್ಮಾನ್ ಖಾನ್ ಪ್ರೀತಿಸಿದ ಯುವತಿಯರು ಸಿನಿಮಾ ರಂಗದವರೇ ಆಗಿರುತ್ತಿದ್ದರು. ಅವರನ್ನು ಮದುವೆಯಾಗಿ ಆತ ತಮ್ಮ ತಾಯಿಯಂತೆ ಮನೆಯಲ್ಲಿ ಇರಿಸಲು ಬಯಸುತ್ತಿದ್ದ ಎನಿಸುತ್ತದೆ. ಆದರೆ ಸಿನಿಮಾ ರಂಗದ ಯುವತಿಯರು ಸಾಕಷ್ಟು ಆಸೆ, ವೃತ್ತಿಯಲ್ಲಿ ನಿರೀಕ್ಷೆಗಳನ್ನು ಇರಿಸಿಕೊಂಡವರಾಗಿರುತ್ತಾರೆ, ಅವರಿಗೆ ಮನೆಯಲ್ಲಿ ಕೂರುವುದು ಇಷ್ಟವಾಗಲ್ಲ, ಹಾಗಾಗಿ ಸಲ್ಮಾನ್ ಖಾನ್ರ ಬಹುತೇಕ ಪ್ರೇಮಪ್ರಸಂಗಗಳು ಮದುವೆಯ ವರೆಗೂ ಬರಲೇ ಇಲ್ಲ’ ಎಂದಿದ್ದರು ಸಲೀಂ.
ತಾನು ಮದುವೆ ಆಗುವ ಯುವತಿ, ತನ್ನ ಮನೆಯಲ್ಲಿರಬೇಕು, ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಹೋಮ್ವರ್ಕ್ ಮಾಡಿಸಬೇಕು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕು, ಹೀಗೆ ತನ್ನ ತಾಯಿ ತನಗೆ ಮಾಡಿದ್ದೆಲ್ಲವನ್ನೂ ನನ್ನ ಪತ್ನಿ ಮಾಡಬೇಕು ಎಂಬ ನಿರೀಕ್ಷೆ ಸಲ್ಮಾನ್ ಖಾನ್ನದ್ದಾಗಿತ್ತು ಆದರೆ ಅದು ಸಾಧ್ಯವಿರಲಿಲ್ಲ. ನಟಿಯರಿಗೆ ನಿರೀಕ್ಷೆಗಳಿರುತ್ತವೆ, ಆಕಾಂಕ್ಷೆಗಳಿರುತ್ತವೆ, ವೃತ್ತಿಯಲ್ಲಿ ಸಾಧನೆ ಮಾಡುವ ಹಂಬಲ ಇರುತ್ತದೆ, ಅವರಿಗೆ ಇದೆಲ್ಲ ಮಾಡಲು ಸಾಧ್ಯವಾಗುವುದಿಲ್ಲ, ಅದು ತಪ್ಪು ಸಹ ಅಲ್ಲ. ಹಾಗಾಗಿ ಸಲ್ಮಾನ್ ಖಾನ್ ಮದುವೆ ಆಗಲಿಲ್ಲ ಎಂದಿದ್ದರು ಸಲೀಂ ಖಾನ್.