ಚೆನ್ನೈ, ಜ. 07 (DaijiworldNews/AA): ತಮಿಳು ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ ಜನನಾಯಗನ್' ಜನವರಿ 9ರಂದು ಬಿಡುಗಡೆಗೆ ಸಿದ್ಧವಾಗಿದ್ದು, ದೇಶ ವಿದೇಶಗಳಲ್ಲೂ ನಟನ ಅಭಿಮಾನಿಗಳು ಈ ಚಿತ್ರದ ರಿಲೀಸ್ಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.

ಮಲೇಷಿಯಾ, ಸಿಂಗಪೂರ್, ಯುಎಸ್ಎ, ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಅರಬ್ ರಾಷ್ಟ್ರಗಳಲ್ಲಿ ಚಿತ್ರಕ್ಕೆ ಬ್ಯಾನ್ ಭೀತಿ ಎದುರಾಗಿದೆ.
ಯುಎಇ, ಸೌದಿ ಅರೇಬಿಯಾದಲ್ಲಿ ಜನನಾಯನ್ ಚಿತ್ರಕ್ಕೆ ನಿಷೇಧ ಹೇರಿರುವುದಾಗಿ ವರದಿಯಾಗಿದೆ. ಚಿತ್ರದ ಟ್ರೇಲರ್ ನೋಡಿಯೇ ಈ ನಿರ್ಧಾರಕ್ಕೆ ಅಲ್ಲಿನ ಸರ್ಕಾರಗಳು ಬಂದಿವೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದ ವಿಲನ್ ಪಾತ್ರಧಾರಿ ಪಾಕಿಸ್ತಾನದಿಂದ ಬಂದವನಾಗಿದ್ದು ಆತ ದೇಶದಲ್ಲಿ ಅಕ್ರಮ ಚಟುವಟಿಯಲ್ಲಿ ಭಾಗಿಯಾಗಿರುತ್ತಾನೆ. ಅವನಿಗೆ ಬುದ್ಧಿ ಕಲಿಸುವ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಹೀಗಾಗಿ ಮುಸ್ಲಿಂ ಜನಸಂಖ್ಯೆಯುಳ್ಳ ರಾಷ್ಟ್ರಗಳಲ್ಲಿ ಈ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ.