ಬೆಂಗಳೂರು, ಜ. 06 (DaijiworldNews/TA): ನೆಚ್ಚಿನ ಹೀರೋ ಜನ್ಮದಿನ ಬಂದಾಗ ಕಟೌಟ್ಗಳು, ಹಾಲಿನ ಅಭಿಷೇಕ, ಸಂಭ್ರಮಾಚರಣೆಗಳು ಸಾಮಾನ್ಯ. ಆದರೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈ ಬಾರಿ ಸಂಭ್ರಮವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಜನವರಿ 8 ರಂದು ಯಶ್ ಜನ್ಮದಿನ ಹಿನ್ನೆಲೆ, ಅಭಿಮಾನಿಗಳು ನಮ್ಮ ಮೆಟ್ರೋದಲ್ಲೇ ಯಶ್ ಫೋಟೋ ಪ್ರದರ್ಶಿಸಿ ವಿಭಿನ್ನವಾಗಿ ಬರ್ತ್ಡೇ ವಿಶ್ ಮಾಡಿದ್ದಾರೆ.

ಅಭಿಮಾನಿ ಸಂಘಟನೆಗಳು ಮೆಟ್ರೋ ರೈಲುಗಳಲ್ಲಿ ಜಾಹೀರಾತು ನೀಡುವ ಮೂಲಕ ಯಶ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದು, ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಮೆಟ್ರೋ ಕೋಚ್ಗಳಲ್ಲಿ ಕಾಣಿಸಿಕೊಂಡ ಯಶ್ ಫೋಟೋಗಳು ಅಭಿಮಾನಿಗಳ ಸಂಭ್ರಮಕ್ಕೆ ಹೊಸ ಆಯಾಮ ನೀಡಿವೆ.
ಈ ವಿಶೇಷ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳ ಕ್ರಿಯೇಟಿವಿಟಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಟೌಟ್ಗಳು ಮತ್ತು ಹಾಲಿನ ಅಭಿಷೇಕದಾಚೆಗೂ ಹೋಗಿ, ಸಾರ್ವಜನಿಕ ಸಾರಿಗೆಯಲ್ಲೇ ತಮ್ಮ ಹೀರೋಗೆ ಶುಭಾಶಯ ಕೋರಿರುವುದು ಅಭಿಮಾನಿಗಳ ಅಚ್ಚುಮೆಚ್ಚಿನ ವಿಚಾರವಾಗುತ್ತಿದೆ.
ಜನವರಿ 8 ಸಮೀಪಿಸುತ್ತಿದ್ದಂತೆ ಯಶ್ ಬರ್ತ್ಡೇ ಸಂಭ್ರಮ ದಿನೇ ದಿನೇ ಜೋರಾಗುತ್ತಿದ್ದು, ಅಭಿಮಾನಿಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರಾಕಿಂಗ್ ಸ್ಟಾರ್ಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.