ಹೈದರಾಬಾದ್, ಡಿ. 20 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಮದುವೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಮದ್ವೆ ಆಗಿಯೇ ಬಿಟ್ಟರಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಗೂ ವಿಜಯ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಯಾಕಂದ್ರೆ ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಗುಟ್ಟಾಗಿ ಹೈದರಾಬಾದ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದ್ವೆಯನ್ನೂ ಕೂಡಾ ರಹಸ್ಯವಾಗಿ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ರಶ್ಮಿಕಾ ಹಾಗೂ ವಿಜಯ್ ಅವರ ಮದುವೆಯ ಫೋಟೋ ಜೊತೆಗೆ ಸೆಲೆಬ್ರಿಟಿಗಳು ಸಹ ಪೋಸ್ಕೊಟ್ಟು ನಿಂತಿರುವ ಫೋಟೋ ವೈರಲ್ ಆಗಿದೆ. ಆದರೆ ಈ ಫೋಟೋ ರಿಯಲ್ ಅಲ್ಲ, ಎಐ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಹಾಗೂ ವಿಜಯ್ ಜೋಡಿ, 2026ರ ಫೆಬ್ರವರಿ 26ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದ್ವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. ಅರಮನೆಗಳ ತವರು ಎಂದೇ ಖ್ಯಾತಿಯಾಗಿರುವ ಉದಯಪುರದ ಅರಮನೆಯಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದ್ವೆ ನೆರವೇರಲಿದೆ. ಈ ಅದ್ಧೂರಿ ಮದ್ವೆಯಲ್ಲಿ ಸೌತ್ನ ಸೂಪರ್ಸ್ಟಾರ್ ಹಾಗೂ ಉತ್ತರ ಭಾರತದ ತಾರೆಯರ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.