ಬೆಂಗಳೂರು, ಡಿ. 18 (DaijiworldNews/AA): 'ಅಪ್ಪುಗೋಸ್ಕರ ನಾನು ಕನ್ನಡ ಕಲಿಯುತ್ತಿದ್ದೇನೆ ಎಂದು ನಟಿ ಪ್ರಿಯಾ ಆನಂದ್ ಕನ್ನಡದ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಪ್ರಿಯಾ ಆನಂದ್ ಅವರು ನಟಿಸಿದ 'ಬಲರಾಮನ ದಿನಗಳು' ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಅಪ್ಪುಗೋಸ್ಕರ ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ರಾಜಕುಮಾರ ಶೂಟಿಂಗ್ಗಾಗಿ ಆಸ್ಟ್ರೇಲಿಯಾದಲ್ಲಿ ಅವನ್ನು ಭೇಟಿ ಮಾಡಿದೆ. ನೀವು ಜಾಸ್ತಿ ಕನ್ನಡ ಸಿನಿಮಾ ಮಾಡಬೇಕು, ಜಾಸ್ತಿ ಕನ್ನಡ ಮಾತನಾಡಬೇಕು ಎಂದು ನನಗೆ ಹೇಳಿದ್ದರು" ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ.
"ಕರ್ನಾಟಕದ ಜನರು, ಆಹಾರ ಎಲ್ಲವನ್ನೂ ಅವರೇ ಪರಿಚಯಿಸಿದ್ದರು. ನನಗೆ ಮನೆಯಲ್ಲಿ ಮಾತನಾಡಲು ಯಾರೂ ಇಲ್ಲ. ಸೆಟ್ನಲ್ಲಿ ವಿನೋದ್ ಮೊದಲಾದವರು ಇದ್ದರು. ನಾನು ಅವರ ಬಳಿ ಮಾತನಾಡಲು ಪ್ರಯತ್ನಿಸಿದೆ" ಎಂದಿದ್ದಾರೆ.