ಕೊಲಂಬೋ, ಡಿ. 17 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಇದೀಗ ತನ್ನ ಗೆಳತಿಯರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಸುಂದರ ಜಾಗಗಳಲ್ಲಿ ಮಸ್ತಿ ಮಾಡಿದ್ದಾರೆ. ತಮಗಿದ್ದ ಎರಡು ದಿನ ರಜದಲ್ಲಿ ರಶ್ಮಿಕಾ ಶ್ರೀಲಂಕಾದಲ್ಲಿ ಶಾರ್ಟ್ ಟ್ರಿಪ್ ಮಾಡಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 26ಕ್ಕೆ ರಶ್ಮಿಕಾ, ವಿಜಯ್ ದೇವರಕೊಂಡ ಮದುವೆಯಾಗುತ್ತಿದ್ದಾರೆ. ಅವರು ತಮ್ಮ ಮದುವೆಯ ತಯಾರಿಯಲ್ಲೂ ತೊಡಗಿಕೊಂಡಿದ್ದಾರೆ.
ಇನ್ನು ರಶ್ಮಿಕಾ ತಮ್ಮ ಗೆಳತಿಯರ ಜೊತೆ ಟ್ರಿಪ್ ಗೆ ಹೋದ ಕಾರಣ ಇದು ಬ್ಯಾಚುಲರ್ ಪಾರ್ಟಿಯಾ ಎಂದು ನೆಟ್ಟಿಗರು ಕೇಳಿದ್ದಾರೆ. ರಶ್ಮಿಕಾ ಗರ್ಲ್ಸ್ ಗ್ಯಾಂಗ್ ಜೊತೆ ಜಾಲಿ ಟ್ರಿಪ್ ಮಾಡಲು ಮದುವೆಯಾದ ಬಳಿಕ ಸಮಯ ಸಿಗುವುದು ಕಷ್ಟ. ಹೀಗಾಗಿ ಪ್ರೀಪ್ಲ್ಯಾನ್ ಆಗಿ ರಶ್ಮಿಕಾ ಬೆಸ್ಟ್ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ನಟಿ ರಶ್ಮಿಕಾ, "ಇತ್ತೀಚೆಗೆ ನನಗೆ 2 ದಿನ ರಜೆ ಸಿಕ್ತು. ಹೀಗಾಗಿ ನನ್ನ ಗರ್ಲ್ಸ್ ಗ್ಯಾಂಗ್ ಜೊತೆ ಸಮಯ ಕಳೆಯಲು ಅವಕಾಶ ಸಿಕ್ತು. ಶ್ರೀಲಂಕಾದ ಸುಂದರ ತಾಣಗಳಲ್ಲಿ ನಾವು ಸಮಯ ಕಳೆದೆವು. ಗರ್ಲ್ಸ್ ಟ್ರಿಪ್ ಎಷ್ಟೇ ಚಿಕ್ಕದಾಗಿದ್ರೂ ಅದು ಅತ್ಯುತ್ತಮವಾಗಿರುತ್ತದೆ. ಈ ಗುಂಪಿನಲ್ಲಿ ಕೆಲವರು ಮಿಸ್ ಆಗಿದ್ದಾರೆ. ಅವರೂ ಬೆಸ್ಟ್ ಫ್ರೆಂಡ್ಸ್. ಗರ್ಲ್ಸ್ ಟ್ರಿಪ್ ಯಾವಾಗ್ಲೂ ಬೆಸ್ಟ್" ಎಂದು ಪೋಸ್ಟ್ ಮಾಡಿದ್ದಾರೆ.