ಚೆನ್ನೈ, ನ. 05(DaijiworldNews/AK): ಜೂನಿಯರ್ ಎನ್ಟಿಆರ್ ಅವರ ಹೊಸ ಲುಕ್ ವೈರಲ್ ಆಗಿದೆ. ಇದರಲ್ಲಿ ಅವರು ಸಾಕಷ್ಟು ತೆಳ್ಳಗಾಗಿದ್ದಾರೆ ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಹೊಸ ಲುಕ್ ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಅವರು ತೂಕ ಕಳೆದುಕೊಂಡರು. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ಅಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಇದಕ್ಕೆ ‘ಡ್ರ್ಯಾಗನ್’ ಎಂದು ಕರೆಯಲಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾದ ಶೂಟಿಂಗ್ ಶುರುವಾಗಿ ಹಲವು ತಿಂಗಳು ಕಳೆದಿವೆ. ಅವರು ‘ಡ್ರ್ಯಾಗನ್’ ಚಿತ್ರದ ಕೆಲಸದಲ್ಲಿಯೇ ಸಂಪೂರ್ಣ ತೊಡಗಿಕೊಂಡಿದ್ದಾರೆ.
ಅಕ್ಕಿನೇನಿ ನಾಗಾರ್ಜುನ ಅವರ 1989ರ ಸೂಪರ್ ಹಿಟ್ ಸಿನಿಮಾ ನವೆಂಬರ್ 24ರಂದು ರೀ-ರಿಲೀಸ್ ಆಗುತ್ತಿದೆ. ಹೊಸ ಅವತಾರದಲ್ಲಿ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ವಿಶ್ ಮಾಡಲು ಜೂನಿಯರ್ ಎನ್ಟಿಆರ್ ಅವರು ಹೊಸ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ತುಂಬಾನೇ ತೆಳ್ಳಗೆ ಕಾಣಿಸಿದ್ದಾರೆ. ಅವರ ಮುಖ ತುಂಬಾನೇ ತೆಳ್ಳಗೆ ಆಗಿದೆ. ಅವರಿಗೆ ಏನಾಯಿತು ಎಂಬ ಆತಂಕ ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಅವರು ಬೇಗ ದಪ್ಪ ಆಗಬೇಕು ಎಂದು ಅನೇಕರು ಮನವಿ ಮಾಡಿದ್ದಾರೆ.