ಬೆಂಗಳೂರು, ನ. 04 (DaijiworldNews/AA): 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದ್ದು, ಈ ಬಗ್ಗೆ ಕೇರಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ನಟ ಪ್ರಕಾಶ ರೈ ವ್ಯಂಗ್ಯ ಮಾಡಿದ್ದಾರೆ.

ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ ಘೋಷಣೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹೊಂದಾಣಿಕೆಯಲ್ಲಿ ನಡೆಯುವ ಪ್ರಶಸ್ತಿ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ನನಗೆ ಕೇರಳ ಚಲನಚಿತ್ರ ಪ್ರಶಸ್ತಿ ಆಯ್ಕೆಯ ವಿಷಯದಲ್ಲಿ ಯಾವುದೇ ಹೇರಿಕೆ, ಒತ್ತಡ ಇರಲಿಲ್ಲ. ಆದರೆ ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಿ 'ಫೈಲ್ಸ್-ಪೈಲ್ಸ್'ಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಅವರಿಗೆ ಮಮ್ಮುಟಿ ಅಂಥಹಾ ನಟರು ಬೇಕಾಗಿಲ್ಲ" ಎಂದಿದ್ದಾರೆ.
ಪ್ರಕಾಶ್ ರೈ ಅಧ್ಯಕ್ಷರಾಗಿದ್ದ ಸಮಿತಿಯು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸೋಮವಾರ ಘೋಷಿಸಿದೆ. 'ಮಂಜ್ಞುಮೆಲ್ ಬಾಯ್ಸ್' ಮತ್ತು 'ಬ್ರಹ್ಮಯುಗಂ' ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿಗಳು ದೊರೆತಿವೆ.