ಚೆನ್ನೈ, ಅ. 21 (DaijiworldNews/AK):ಸಮಂತಾ ಋತ್ ಪ್ರಭು ದಕ್ಷಿಣದ ಸ್ಟಾರ್ ನಟಿಯಾಗಿ ಮಿಂಚಿದವರು. ಆದರೆ ನಟಿ ಸಮಂತಾ ಇತ್ತೀಚೆಗೆ ಸಿನಿಮಾಗಳಿಗಿಂತಲೂ ತಮ್ಮ ಖಾಸಗಿ ಜೀವನದಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ.

ಸಮಂತಾ, ನಟ ನಾಗ ಚೈತನ್ಯ ಅವರನ್ನು ಪ್ರೀತಿ ಮದುವೆ ಆಗಿದ್ದರು. ಆದರೆ ಕೇವಲ ನಾಲ್ಕು ವರ್ಷದ ದಾಂಪತ್ಯದ ಬಳಿಕ ಇಬ್ಬರೂ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದು ನಾಗ ಚೈತನ್ಯ, ಶೋಭಿತಾ ಜೊತೆಗೆ ವಿವಾಹವಾಗಿದ್ದಾರೆ. ಸಮಂತಾ ಸಹ ತಮಗಾಗಿ ವ್ಯಕ್ತಿಯೊಬ್ಬರನ್ನು ಹುಡುಕಿಕೊಂಡಿದ್ದು, ಇದೀಗ ಅವರೊಟ್ಟಿಗೆ ಸುತ್ತಾಡುತ್ತಿದ್ದಾರೆ. ಇದೀಗ ಅವರ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ನಟಿ ಸಮಂತಾ ಬಾಯ್ಫ್ರೆಂಡ್ ಜೊತೆಗೆ ಲಿವಿನ್ನಲ್ಲಿರುವ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಜೊತೆಗೆ ಪ್ರೀತಿಯಲ್ಲಿದ್ದಾರೆ. ಈ ಇಬ್ಬರೂ ಪರಸ್ಪರ ಲಿವಿನ್ ರಿಲೇಷನ್ನಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವಾರು ತಿಂಗಳುಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಇಬ್ಬರೂ ಸಹ ಇದನ್ನು ಖಾತ್ರಿ ಪಡಿಸಿರಲಿಲ್ಲ. ಇದೀಗ ಸಮಂತಾ, ರಾಜ್ ಅವರ ಕುಟುಂಬದ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.