ನವದೆಹಲಿ , ಅ. 20 (DaijiworldNews/AK): ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ತಮ್ಮ ಮಗುವಿನ ಆಗಮನದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. . ಈಗ ಪರಿಣಿತಿ ತಾಯಿಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ರಾಘವ್ ಚಡ್ಡಾ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

‘ಕೊನೆಗೂ, ನಮ್ಮ ಮಗ ಬಂದಿದ್ದಾನೆ. ಈ ಪುಟ್ಟ ಅತಿಥಿ ಬರುವ ಮೊದಲು ಜೀವನ ಹೇಗಿತ್ತು ಎಂದು ನಮಗೆ ನಿಜವಾಗಿಯೂ ನೆನಪಿಲ್ಲ. ನಮ್ಮ ಹೃದಯ ಸಂತೋಷದಿಂದ ತುಂಬಿದೆ. ಮೊದಲು ನಾವು ಒಬ್ಬರಿಗೊಬ್ಬರು ಇದ್ದೆವು ಆದರೆ ಈಗ ನಮಗೆ ಎಲ್ಲವೂ ಇದೆ. ಪ್ರೀತಿ ಮತ್ತು ಕೃತಜ್ಞತೆಯಿಂದ, ಪರಿಣಿತಿ ಮತ್ತು ರಾಘವ್’ ಎಂದು ರಾಘವ್ ಚಡ್ಡಾ ಪೋಸ್ಟ್ ಮಾಡಿದ್ದಾರೆ.
ರಾಘವ್ ಅವರು ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರೂ ದಂಪತಿಗಳ ಹೊಸ ಪ್ರಯಾಣಕ್ಕೆ ಪ್ರೀತಿ ಮತ್ತು ಆಶೀರ್ವಾದಗಳನ್ನು ಕಳುಹಿಸಿದ್ದಾರೆ.
ಪರಿಣಿತಿ ಮತ್ತು ರಾಘವ್ ಅವರ ವಿವಾಹ ಸಮಾರಂಭವು ಸೆಪ್ಟೆಂಬರ್ 24, 2023ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಿತು.