ಹೈದರಾಬಾದ್, ಅ. 19 (DaijiworldNews/AA): ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಋತ್ ಪ್ರಭು ಕೆಲವು ಎನ್ಜಿಯೋಗಳ ಜೊತೆಗೆ ಕೈ ಜೋಡಿಸಿದ್ದಾರೆ. ಇದೀಗ ಕುಟುಂಬಗಳು ಇಲ್ಲದ, ಅನಾಥ ಮಕ್ಕಳೊಡನೆ ದೀಪಾವಳಿ ಆಚರಿಸಿ ಒಂದು ಉತ್ತಮ ಕಾರ್ಯ ಮಾಡಿದ್ದಾರೆ.

ತಾವು ಮಕ್ಕಳೊಡಗೆ ಆಟವಾಡಿ, ಡ್ಯಾನ್ಸ್ ಮಾಡಿ, ದೀಪಾವಳಿ ಹಬ್ಬ ಆಚರಿಸಿರುವ ಫೋಟೋಗಳನ್ನು ಸಮಂತಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಕೆಲವು ಎನ್ಜಿಓಗಳ ಜೊತೆ ಗೂಡಿ ಈ ಉತ್ತಮ ಕಾರ್ಯದ ಭಾಗಿಯಾಗಿದ್ದಾರೆ.
ನಟಿ ಸಮಂತಾ ಕೆಲವು ಎನ್ಜಿಯೋಗಳ ಜೊತೆಗೆ ಕೈ ಜೋಡಿಸಿರುವುದು ಅಷ್ಟೇ ಅಲ್ಲದೇ ಮಹಿಳಾ ಸ್ವಾವಲಂಬನೆ, ಆರೋಗ್ಯ ಇನ್ನೂ ಕೆಲವು ಸಾಮಾಜಿಕ ವಿಷಯಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.