ಚೆನ್ನೈ, ಸೆ. 03 (DaijiworldNews/AK): ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಂಪಲ್ ಲೈಫ್ ಇಷ್ಟ ಪಡುತ್ತಾರೆ. ಇದೀಗ ಇಂಥದ್ದೇ ಲೈಫ್ ಫೀಲ್ ಮಾಡಿರುವ ನಟಿ ಶೋಭಿತಾ ಧೂಲಿಪಲಾ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಾಗೂ ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ.

ಸೂಪರ್ ಸ್ಟಾರ್ ನಾಗಾರ್ಜುನ ಸೊಸೆ, ನಟ ನಾಗಚೈತನ್ಯ ಪತ್ನಿ ಶೋಭಿತಾ ಪ್ರವಾಸದ ವೇಳೆ ಅಡುಗೆ ಮಾಡುತ್ತಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ನಾಗಚೈತನ್ಯ 2ನೇ ಪತ್ನಿಯಾಗಿರುವ ಶೋಭಿತಾ ಸೂಪರ್ ಮಾಡೆಲ್ ಹಾಗೂ ನಟಿಯಾಗಿಯೂ ಗುರುತಿಸಿಕೊಂಡವರು. ಆದ್ರೆ ಇಷ್ಟು ಸರಳವಾಗಿರುತ್ತಾರೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ನಡೆದುಕೊಂಡಿದ್ದಾರೆ. ಈ ಮೂಲಕ ಶೋಭಿತಾಗೆ ಅಡುಗೆ ಮಾಡೋದು ಇಷ್ಟ ಅನ್ನೋದು ಸಾಬೀತಾಗಿದೆ.