ಬೆಂಗಳೂರು, ಸೆ. 02 (DaijiworldNews/AK): ಕಿಚ್ಚ ಸುದೀಪ್ ಅವರಿಗೆ ಇಂದು (ಸೆ.2) 52ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನ ಊರಿನಲ್ಲಿ ಇರದ ಕಾರಣ ಸುದೀಪ್ ರಾತ್ರಿಯೇ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ಮಾರ್ಕ್ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಿದೆ. ಜೊತೆಗೆ ಕ್ರಿಸ್ಮಸ್ ಹಬ್ಬಕ್ಕೆ ಸಿನಿಮಾ ಥಿಯೇಟರ್ಗೆ ಬರೋದಾಗಿ ಅಭಿಮಾನಿಗಳಿಗೆ ಕಿಚ್ಚನಿಂದ ಗುಡ್ನ್ಯೂಸ್ ಸಿಕ್ಕಿದೆ. ಇದೀಗ ಬಿಲ್ಲ ರಂಗ ಬಾಷಾ ಸಿನಿಮಾದ ಬಿಗ್ ಅಪ್ಡೇಟ್ವೊಂದು ಸುದೀಪ್ ಭಕ್ತಗಣಕ್ಕೆ ಸಿಕ್ಕಿದೆ.
ವಿಕ್ರಾಂತ್ ರೋಣ ಚಿತ್ರದ ಸಕ್ಸಸ್ನ ನಂತರ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರುವ ಬಿಲ್ಲ ರಂಗ ಬಾಷಾ . ಈ ಸಿನಿಮಾದ ಖಡಕ್ ಪೋಸ್ಟರ್ ಬರ್ತ್ಡೇ ಗೆ ಸ್ಪೆಷಲ್ ಚಿತ್ರತಂಡ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಜಯಮಾಲಾ, ದಿವಂಗತ ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದಂದು ಮರಣೋತ್ತರ ಕರ್ನಾಟಕ ರತ್ನ ಕೊಡಬೇಕು. ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಮಾತಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.