ಬೆಂಗಳೂರು, ಸೆ. 01 (DaijiworldNews/AA): ಸ್ಯಾಂಡಲ್ವುಡ್ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರು ಮದುವೆ ಮಾಡಿಕೊಳ್ಳಲು ಮುಂದಾಗಿದ್ದು, ಕೊನೆಗೂ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಿದ್ದಾರೆ.

ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ಇದು ಮನೆಯವರು ನೋಡಿರುವ ಸಂಬಂಧ ಎಂದು ಹೇಳಲಾಗಿದೆ.
ನಟ ಚಿಕ್ಕಣ್ಣ ಅವರ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ. ಮದುವೆಯ ದಿನಾಂಕವೂ ನಿಗದಿ ಆಗಿದೆ ಎನ್ನಲಾಗಿದೆ.
ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಅವರು ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.