ಬೆಂಗಳೂರು, ಆಗಸ್ಟ್ 28 (Daijiworld News/TA): ಗಣೇಶ ಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಮೂವೀಸ್ ಕಡೆಯಿಂದ ಬಿಗ್ ಅಪ್ಡೇಟ್ ಲಭಿಸಿದೆ. ತುಳು ಮೂವಿ ನಿರ್ಮಾಣಕ್ಕೆ ಸಜ್ಜಾಗಿರುವ ಗೋಲ್ಡನ್ ಮೂವೀಸ್ ತಂಡ ಇದೀಗ ಗಣೇಶ ಚತುರ್ಥಿಯ ದಿನದಂದು ಟೈಟಲ್ ಪೋಸ್ಟರ್ ಹಂಚಿಕೊಂಡು ಸಂಭ್ರಮಿಸಿದೆ. ಪ್ರೊಡಕ್ಶನ್ ನಂಬರ್ ವನ್ ಎಂದು ತಾತ್ಕಾಲಿಕ ಶೀರ್ಷಿಕೆ ನೀಡಿದ್ದ ಚಿತ್ರಕ್ಕೆ ಪಿಚ್ಚರ್ ಎಂಬ ಶೀರ್ಷಿಕೆ ನೀಡಿ ಸಮಾಜಿಕ ಜಾಲತಾಣದಲ್ಲಿ ಟೈಟಲ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಹೌದು ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗೋಲ್ಡನ್ ಮೂವೀಸ್ ಇದೀಗ ತುಳು ಸಿನಿಮಾ ನಿರ್ಮಾಣಕ್ಕಿಳಿದಿದೆ. "ಗೋಲ್ಡನ್ ಮೂವೀಸ್" ಸಂಸ್ಥೆಯಡಿ ಶಿಲ್ಪಾಗಣೇಶ್ ನಿರ್ಮಾಣದ, ಇನ್ನು ಸಂದೀಪ್ ಬೆದ್ರ ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾದ ಮುಹೂರ್ತ ಸಮಾರಂಭ ಕುದ್ರೋಳಿ ದೇವಸ್ಥಾನದಲ್ಲಿ ನಡೆದಿತ್ತು. ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡು ಸ್ಟಾರ್ ಮೆರುಗು ನೀಡಿದ್ದರು. ಇದೀಗ ಅಧಿಕೃತವಾಗಿ ಪಿಕ್ಚರ್ ಎಂಬ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ನಿತ್ಯ ಪ್ರಕಾಶ್ ಬಂಟ್ವಾಳ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಮೃತ ನಾಯಕ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ರವಿ ರಾಮಕುಂಜ, ವಜ್ರಧೀರ್ ಜೈನ್, ರೂಪ ವರ್ಕಾಡಿ, ಸದಾಶಿವ ಅಮೀನ್, ಸುಂದರ್ ರೈ ಮಂದಾರ, ಚಂದ್ರ ಹಾಸ ಮಾಣಿ, ಹರಿಶ್ಚಂದ್ರ ಪೆರಾಡಿ, ಪಾಂಡುರಂಗ ಅಂಚನ್, ಸುರೇಶ್ ಅಂಚನ್, ಜಯಶೀಲಾ ಮರೋಳಿ, ಧೃತಿ ಸಾಯಿ ಸೇರಿ ಹಲವರು ನಟಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಗ್ರಾಹಕರಾಗಿ ಸಂತೋಷ್ ರೈ ಪಾತಜೆ, ಸಂಗೀತ ನಿರ್ದೇಶಕರಾಗಿ ಸ್ಯಾಮೂವಲ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಮೋಹನ್ ಭಟ್ಕಳ್, ಮ್ಯಾನೇಜರ್ ಪ್ರಶಾಂತ್ ಆಳ್ವಾ ಕಲ್ಲಾ ಇದ್ದು, ನಿರ್ದೇಶನ ತಂಡದಲ್ಲಿ ಕಿಶೋರ್ ಮೂಡಬಿದ್ರಿ, ಮಣಿ, ಪ್ರಸನ್ನ ಪಿ, ಅಕ್ಷತ್ ವಿಟ್ಲಾ, ಫರಾಜ್ ಕಾರ್ಯ ನಿರ್ವಹಿಸಲಿದ್ದಾರೆ.