ಚೆನ್ನೈ, ಜು. 06 (DaijiworldNews/AK): ದಶಕಗಳಿಂದಲೂ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ನಯನತಾರಾ ದಕ್ಷಿಣದ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಒಬ್ಬ ಸ್ಟಾರ್ ನಟನ ಜೊತೆಗೆ ಸಿನಿಮಾದಲ್ಲಿ ನಟಿಸಿ ದೊಡ್ಡ ತಪ್ಪು ಮಾಡಿದೆ ಎಂದು ಕೆಲ ವರ್ಷಗಳ ಹಿಂದೆ ನಯನತಾರಾ ಹೇಳಿಕೊಂಡಿದ್ದರು. ಆ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.

ತಮಿಳಿನ ಸ್ಟಾರ್ ನಟ ಸೂರ್ಯ ಜೊತೆಗೆ ‘ಗಜಿನಿ’ ಸಿನಿಮಾನಲ್ಲಿ ನಯನತಾರಾ ನಟಿಸಿದ್ದರು. ‘ಗಜಿನಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಬಹಳ ಒಳ್ಳೆಯ ಹೆಸರು ಬಂದಿತ್ತು. . ಹಾಗಿದ್ದರೂ ಸಹ ನಯನತಾರಾಗೆ ‘ಗಜಿನಿ’ ಸಿನಿಮಾನಲ್ಲಿ ನಟಿಸಿದ್ದು ಇಷ್ಟ ಆಗಲಿಲ್ಲವಂತೆ. ಅದಕ್ಕೆ ಕಾರಣವನ್ನೂ ಸಹ ನಟಿ ನಯನತಾರಾ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಗಜಿನಿ ಸಿನಿಮಾನಲ್ಲಿ ನಟಿಸಿದ್ದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಆ ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿತ್ತು. ಶೂಟಿಂಗ್ಗೆ ಮುಂಚೆ ನನಗೆ ಹೇಳಿದಂತೆ ಆ ಪಾತ್ರವನ್ನು ತೋರಿಸಲಿಲ್ಲ. ನನ್ನನ್ನು ಅತ್ಯಂತ ಕೆಟ್ಟದಾಗಿ ಆ ಸಿನಿಮಾನಲ್ಲಿ ತೋರಿಸಲಾಗಿದೆ. ಆದರೆ ಆಗ ನಾನು ಆ ಬಗ್ಗೆ ಮಾತನಾಡಲಿಲ್ಲ. ಅದು ವೃತ್ತಿಪರತೆ ಅಲ್ಲ ಎಂದು ಸುಮ್ಮನಿದ್ದೆ. ಆದರೆ ಆ ಸಿನಿಮಾ ಅನ್ನು ನಾನು ಒಪ್ಪಿಕೊಳ್ಳಲೇ ಬಾರದಿತ್ತು ಎಂದಿದ್ದಾರೆ ನಯನತಾರಾ.