ಬೆಂಗಳೂರು, ಜೂ. 15 (DaijiworldNews/TA) : ಬಹಳ ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ನಿರೂಪಣೆಯ ಜೊತೆಗೆ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದಾರೆ ಪ್ರತಿ ಎಪಿಸೋಡಿಗೆ ಲಕ್ಷಾಂತರ ಸಂಭಾವನೆ ಪಡೆವ ಅನುಶ್ರೀ, ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.

ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿಗಳು. ಕಾರಿನ ಟಾಪ್ ಎಂಡ್ ಮಾಡೆಲ್ಲಿನ ಬೆಲೆ 40 ಲಕ್ಷ ರೂಪಾಯಿಗಳು. ಅನುಶ್ರೀ ಯಾವ ಮಾಡೆಲ್ ಅನ್ನು ಖರೀದಿ ಮಾಡಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಅನುಶ್ರೀ, ಹೊಸ ಕಾರಿಗೆ ಕೆಲವು ಹೆಚ್ಚುವರಿ ಆಕ್ಸೆಸರಿ, ಟಿಂಟ್, ಪಿಪಿಎಫ್ ಕೋಟಿಂಗ್ ಇನ್ನಿತರೆಗಳನ್ನು ಹಾಕಿಸಿದ್ದಾರೆ. ಅನುಶ್ರೀ ಅವರ ಹೊಸ ಕಾರಿಗೆ ಹೊಸ ಆಕ್ಸೆಸ್ಸರಿಗಳನ್ನು ಹಾಕಿದ ಎಕ್ಸ್ಪರ್ಟ್ ಕಾರ್ ಕೇರ್ನವರು ಅನುಶ್ರೀ ಅವರ ಹೊಸ ಕಾರಿನ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.