ಮುಂಬೈ, ,ಜೂ. 12 (DaijiworldNews/AK):ನಟಿ ಆಲಿಯಾ ಭಟ್ ಈಗ ಅವರು ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದ ಬಳಿಕ ಅವರು ಹೆಸರನ್ನು ಬದಲಿಸಿಕೊಂಡಿದ್ದಾರೆ.

ಆಲಿಯಾ ಅನ್ನೋದು ಹಾಗೆಯೇ ಇದೆ. ಆದರೆ, ಭಟ್ ಬದಲು ಅವರು ಕಪೂರ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಆಲಿಯಾ ಭಟ್ ಎಂದೇ ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
ಆಲಿಯಾ ಭಟ್ ಅವರು ವಿವಾಹ ಆಗಿದ್ದು ರಣಬೀರ್ ಕಪೂರ್ ಅವರನ್ನು . ವಿವಾಹದ ಬಳಿಕವೂ ಅವರನ್ನು ಆಲಿಯಾ ಭಟ್ ಎಂದೇ ಕರೆಯಲಾಗುತ್ತಿದೆ. ಈ ಮೊದಲು ಬಚ್ಚನ್ ಕುಟುಂಬ ಸೇರಿದ ಐಶ್ವರ್ಯಾ ರೈ ಅವರನ್ನು ಐಶ್ವರ್ಯಾ ರೈ ಬಚ್ಚನ್ ಎಂದು ಕರೆಯಲಾಗಿದೆ. ಕರೀನಾ ಕಪೂರ್ ಅವರನ್ನು ಕರೀನಾ ಕಪೂರ್ ಖಾನ್ ಎಂದು ಕರೆಯಲಾಗಿದೆ. ಆದರೆ, ಆಲಿಯಾ ಎಂದಿಗೂ ಆಲಿಯಾ ಭಟ್ ಕಪೂರ್ ಎಂದು ಕರೆಯಲಾಗಿಲ್ಲ. ಆದರೆ, ಈಗ ಅವರು ಇದನ್ನು ಅಧಿಕೃತ ಮಾಡಿಕೊಂಡಂತಿದೆ.
ಆಲಿಯಾ ಭಟ್ ಅವರು ವ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್’ ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.