ಚೆನ್ನೈ, 27 (DaijiworldNews/AK): ತೆಲುಗು ನಟ ನಾಗಚೈತನ್ಯ ‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ದಂಡು ಜೊತೆ ಅವರು ಕೈಜೋಡಿಸಿದ್ದಾರೆ.

ಸಾಯಿ ಪಲ್ಲವಿ ಜೊತೆಗಿನ ‘ತಾಂಡೇಲ್’ ಚಿತ್ರದ ಯಶಸ್ಸಿನ ಬಳಿಕ ವಿಭಿನ್ನ ಕಥೆಯೊಂದಕ್ಕೆ ಓಕೆ ಎಂದಿದ್ದಾರೆ. ಯಶಸ್ಸಿಗಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಥ್ರಿಲ್ಲರ್ ಕಥೆ ಹೇಳೋಕೆ ನಾಗಚೈತನ್ಯ ಸಜ್ಜಾಗಿದ್ದಾರೆ. ಹೊಸ ಚಿತ್ರದ ತಯಾರಿ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ಚಿತ್ರದ ಅನೌನ್ಸ ಮಾಡಿದ್ದಾರೆ.
‘ಪುಷ್ಪ 2’ ಖ್ಯಾತಿಯ ಡೈರೆಕ್ಟರ್ ಸುಕುಮಾರ್ ಮತ್ತು ಬಿವಿಎಸ್ಎನ್ ಪ್ರಸಾದ್ ಬರೆದ ಕಥೆಗೆ ಕಾರ್ತಿಕ್ ದಂಡು ನಿರ್ದೇಶನ ಮಾಡಲಿದ್ದಾರೆ. ಪೌರಾಣಿಕ ಥ್ರಿಲ್ಲರ್ ಅಂಶದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಮುಂದಿನ ವರ್ಷ ಈ ಸಿನಿಮಾ ರಿಲೀಸ್ಗೆ ಚಿತ್ರತಂಡ ಪ್ಲ್ಯಾನ್ ಮಾಡಿದೆ.