ಮುಂಬೈ, ಏ.21 (DaijiworldNews/AA): ನಟಿ ಪ್ರಣಿತಾ ಸುಭಾಷ್ ಹಾಗೂ ನಿತಿನ್ ರಾಜು ದಂಪತಿ ಮಗನ ನಾಮಕರಣ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಅವರ ಮಗನಿಗೆ ಮಹಾಭಾರತದ ಪ್ರಮುಖ ವ್ಯಕ್ತಿಯ ಹೆಸರಿಟ್ಟಿದ್ದಾರೆ.

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ತಮ್ಮ ಮಕ್ಕಳಿಗೆ ಫ್ಯಾನ್ಸಿ ಹೆಸರನ್ನು ಇಡಲು ಬಯಸುತ್ತಾರೆ. ಆದರೆ ನಟಿ ಪ್ರಣಿತಾ ಅವರು ತಮ್ಮ ಮಗನಿಗೆ ಅವರು ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ. ಇನ್ನು ಅವರು ತಮ್ಮ ಮಗನಿಗೆ ಈ ಹೆಸರಿಡಲು ಕಾರಣ ವಿವರಿಸಿದ್ದಾರೆ.
'ನನ್ನ ತಂದೆಯ ತಂದೆ ಹೆಸರು ಬಾಲಕೃಷ್ಣ ಅಂತ. ನಮ್ಮ ಹಾಸ್ಪಿಟಲ್ ಹೆಸರು ಶ್ರೀಕೃಷ್ಣ. ನನ್ನ ಪತಿಯ ತಂದೆಯ ಹೆಸರು ವಾಸುದೇವ ಅಂತ. ಎಲ್ಲಾ ಒಟ್ಟಿಗೆ ಸೇರಿ ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದೇವೆ' ಎಂದು ತಿಳಿಸಿದ್ದಾರೆ. ಇನ್ನು ಅವರು ಪೌರಾಣಿಕ ಪಾತ್ರದ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.