ಉಡುಪಿ, ಏ 01(DaijiworldNews/AA): ಚಿರತೆಯೊಂದು ಕೋಳಿ ಗೂಡಿಗೆ ನುಗ್ಗಿ, ಕೋಳಿ ತಿಂದಿರುವ ಘಟನೆ ಉಡುಪಿ ಮಣಿಪಾಲದ ಸರಳೆಬೆಟ್ಟುವಿನಲ್ಲಿ ನಡೆದಿದೆ.
![](https://daijiworld.ap-south-1.linodeobjects.com/Linode/img_tv247/AA-010424-udupicheeta.jpg)
ಸರಳಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜಾರವರ ಮನೆಯಲ್ಲಿನ ಕೋಳಿ ಗೂಡಿಗೆ ರಾತ್ರಿ ಹೊತ್ತಿನಲ್ಲಿ ಚಿರತೆ ಕನ್ನ ಹಾಕಿದೆ. ಚಿರತೆಯು ಎರಡು ಕೋಳಿಗಳನ್ನು ತಿನ್ನುತ್ತಿರುವ ದೃಶ್ಯ ಮನೆಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಸದ್ಯ ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸೆರಳೆಬೆಟ್ಟು ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಕಳ, ಸಣ್ಣಕ್ಕಿ ಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರ ಸೇರಿದಂತೆ ಮೊದಲಾದ ಕಡೆ ಚಿರತೆ ಸಂಚಾರ ಕಂಡು ಬಂದಿದ್ದು, ಅದರ ಹಾವಳಿ ಹೆಚ್ಚಾಗಿದೆ. ಸ್ಥಳೀಯರು ಈ ಪರಿಸರದಲ್ಲಿ ಎರಡು-ಮೂರು ಚಿರತೆ ಇದೆ ಎಂದು ಹೇಳುತ್ತಿದ್ದಾರೆ.
ಇನ್ನು ಇತ್ತೀಚೆಗೆ ಕೆಳಪರ್ಕದಲ್ಲಿ ಚಿರತೆ ಕಂಡಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಸರಳೆಬೆಟ್ಟು ಕೋಡಿ ಪರಿಸರದಲ್ಲಿ ಬೋನನ್ನು ಇರಿಸಿದರು ಚಿರತೆಯನ್ನು ಬಂಧಿಸುವ ಕ್ರಮ ಯಶಸ್ವಿಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಈ ಭಾಗದಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ.