ಕೆನ್ಯಾ, ಫೆ 12 (DaijiworldNews/MS): ಕೆನ್ಯಾದ ಮ್ಯಾರಥಾನ್ ವಿಶ್ವ ರೆಕಾರ್ಡ್ ಹೊಂದಿದ ಅಥ್ಲೀಟ್ ಕೆಲ್ವಿನ್ ಕಿಪ್ಟಮ್ ಮತ್ತು ಅವರ ಕೋಚ್ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ದುರಂತವೆಂದರೆ ವಿಶ್ವದಾಖಲೆ ಮುರಿದು ಐದು ತಿಂಗಳು ಕಳೆಯುವಷ್ಟರಲ್ಲಿ ಕೆಲ್ವಿನ್ ಕಿಪ್ಟಮ್ ಇಹಲೋಕ ತ್ಯಜಿಸಿದ್ದಾರೆ. ಕೇವಲ 24ವರ್ಷದ ಅವರು ಕಪ್ಟಗಾಟ್ನಿಂದ ಎಲ್ಡೋರೆಟ್ಗೆ ರಾತ್ರಿ ಸುಮಾರು 11 ಗಂಟೆ ವೇಳೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅಪಘಾತ ನಡೆದಿದೆ.
![](https://daijiworld.ap-south-1.linodeobjects.com/Linode/img_tv247/ms-120224-runer.jpg)
2023ರ ಅಕ್ಟೋಬರ್ನಲ್ಲಿ ಚಿಕಾಗೋದಲ್ಲಿ ನಡೆದ ಮ್ಯಾರಥಾನ್ ಅನ್ನು ಅವರು 2:00:35 ಅವಧಿಯಲ್ಲಿ ಪೂರ್ಣಗೊಳಿಸಿ ನೂತನ ವಿಶ್ವ ದಾಖಲೆ ಸೃಷ್ಟಿಸಿದ್ದರು.
ಅವರು ಟೊಯೊಟಾ ಪ್ರೀಮಿಯೊವನ್ನು ಚಲಾಯಿಸುತ್ತಿದ್ದಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯಿಂದ ಆಚೆಗೆ ತಿರುಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಿಪ್ಟಮ್ ಜತೆಗೆ ಅವರ ರುವಾಂಡನ್ ತರಬೇತುದಾರ ಗೆರ್ವೈಸ್ ಹಕಿಝಿಮಾನ ಕೂಡಾ ಮೃತಪಟ್ಟಿದ್ದಾರೆ.