ಉಡುಪಿ, ಫೆ 09 (DaijiworldNews/HR): ಉಡುಪಿಯ ಅಂಜುಮನ್ ಮಸೀದಿಯಲ್ಲಿ ನಮಾಝ್ ಪ್ರಾರ್ಥನೆ ಮಾಡುವ ವೇಳೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
![](https://daijiworld.ap-south-1.linodeobjects.com/Linode/img_tv247/hr-090224-masid.jpg)
![](https://daijiworld.ap-south-1.linodeobjects.com/Linode/images3/denzil_090224_namaz1.jpg)
![](https://daijiworld.ap-south-1.linodeobjects.com/Linode/images3/denzil_090224_namaz2.jpg)
![](https://daijiworld.ap-south-1.linodeobjects.com/Linode/images3/denzil_090224_namaz3.jpg)
ಮೃತರನ್ನು ದೊಡ್ಡಣಗುಡ್ಡೆ ಕರಂಬಳ್ಳಿ ನಿವಾಸಿ ಮುಸ್ತಾಕ್(55) ಎಂದು ಗುರುತಿಸಲಾಗಿದೆ.
ಮುಸ್ತಾಕ್ ಅವರು ಮಧ್ಯಾಹ್ನ ಜುಮಾ ನಮಾಝ್ಗಾಗಿ ಮಸೀದಿಗೆ ಬಂದಿದ್ದು, ಅಲ್ಲಿ ನಮಾಝ್ ಮಾಡುವ ವೇಳೆ ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.