ಲಂಡನ್, ಫೆ 06 (DaijiworldNews/MS): ಬ್ರಿಟನ್ ರಾಜ ಚಾರ್ಲ್ಸ್ -3 (King Charles III) ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್ ಹ್ಯಾಮ್ ಅರಮನೆ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
![](https://daijiworld.ap-south-1.linodeobjects.com/Linode/img_tv247/ms-060224-chals.jpg)
75 ವರ್ಷದ ರಾಜ ಚಾರ್ಲ್ಸ್ -3 ಅವರಿಗೆ ಯಾವ ಕ್ಯಾನ್ಸರ್ ಇದೆ ಎಂದು ಮಾಹಿತಿ ನೀಡಿಲ್ಲ. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪರೀಕ್ಷೆ ನಡೆಸಿದಾದ ಕ್ಯಾನ್ಸರ್ ರೋಗಲಕ್ಷಣ ಕಂಡುಬಂದಿದೆ ಎಂಬ ಅಧಿಕೃತ ಮಾಹಿತಿ ಅರಮನೆಯಿಂದ ನೀಡಲಾಗಿದೆ.
ಕ್ಯಾನ್ಸರ್ಗೆ ಒಳಗಾಗಿರುವ ಕಿಂಗ್ ಚಾರ್ಲ್ಸ್ III ಸಾರ್ವಜನಿಕ ಭೇಟಿಯನ್ನು ರದ್ದು ಮಾಡಿದ್ದು, ಅರಮನೆಯಲ್ಲಿಯೇ ಸೋಮವಾರದಿಂದಲೇ ಚಿಕಿತ್ಸೆ ನೀಡಲು ವೈದ್ಯರು ತಯಾರಿ ನಡೆಸಿದ್ದಾರೆ.
ಚಿಕಿತ್ಸೆ ಸಂದರ್ಭ ಸಾರ್ವಜನಿಕರಿಂದ ದೂರವಿದ್ದರೂ, ಎಂದಿನಂತೆ ರಾಜ್ಯ ವ್ಯವಹಾರ ಮತ್ತು ಅಧಿಕೃತ ದಾಖಲೆಗಳನ್ನು ಸಹಿಹಾಕುವುದು ಇತ್ಯಾದಿಗಳನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.