ದುಬೈ, ಜ 10(DaijiworldNews/SK): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿಗೆ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಒಂಬತ್ತನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ತಲುಪಿದ್ದಾರೆ.
![](https://daijiworld.ap-south-1.linodeobjects.com/Linode/img_tv247/SK-100124-virat.jpg)
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿಗೆ ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ಸರಣೆ ಪಂದ್ಯಾಟದಲ್ಲಿ ಒಂದು ಅರ್ಧಶತಕ ಸಹಿತ 172 ರನ್ ಗಳಿಸುವ ಮೂಲಕ ತಮ್ಮ ಖಾತೆಯಲ್ಲಿ ೭೭೫ ರೇಟಿಂಗ್ ಪಾಯಿಂಟ್ ಗಳನ್ನು ಹೊಂದಿದ್ದಾರೆ. ಈ ಮೂಲಕ ಅಗ್ರಸ್ಥಾನದ ಕಡೆಗೆ ಮುನ್ನುಗ್ಗಿದ್ದಾರೆ.
ಇನ್ನು ಈ ಮೊದಲು ಶ್ರೇಯಾಂಕದ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರ ಬಾಬರ್ ಅಜಂ ಆರನೇ ಸ್ಥಾನದಲ್ಲಿದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವೈಫಲ್ಯದಿಂದ ಅವರ ಖಾತೆಯಲ್ಲಿ (768) ರೇಟಿಂಗ್ ಪಾಯಿಂಟ್ ಗಳಿದ್ದು, ಎರಡು ಸ್ಥಾನಗಳನ್ನು ಕಳೆದುಕೊಂಡು ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.