ಹ್ಯಾಂಗ್ಝೂ, ಅ 04 (DaijiworldNews/HR): ಹ್ಯಾಂಗ್ಝೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-041023-chopra.jpg)
ನೀರಜ್ ಚೋಪ್ರಾ ಅವರಿಗೆ ತೀವ್ರ ಪೈಪೋಟಿ ನೀಡಿದ ಭಾರತದ ಇನ್ನೋರ್ವ ಕಿಶೋರ್ ಜೆನಾ ಬೆಳ್ಳಿಯ ಪದಕವನ್ನು ಗೆದ್ದಿದ್ದು ಭಾರತಕ್ಕೆ ಮತ್ತೆ ಎರಡು ಪದಕ ಸೇರಿದೆ.
ಇನ್ನು ಪುರುಷರ 4×400 ಮೀ ರಿಲೇಯಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಿದ್ದು, 3:01.58 ಸಮಯದಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದೆ.. ಇದರೊಂದಿಗೆ 2023 ರ ಏಷ್ಯನ್ ಗೇಮ್ಸ್ನಲ್ಲಿ ಭಾರತ 81 ಪದಕಗಳನ್ನು ಗೆದ್ದಂತಾಗಿದೆ.
ಈ ಬಾರಿ ಭಾರತವು 100 ಪದಕಗಳ ಗುರಿಯನ್ನು ಹೊಂದಿದ್ದು ಅದು ಈಗ ನಿಜವಾಗುವ ಸಾಧ್ಯತೆ ತೋರುತ್ತಿದೆ.