ಅಹಮದಾಬಾದ್,ಮೇ 27 (DaijiworldNews/KH): ಐಪಿಎಲ್ ಸೀಸನ್ 16 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 42 ರನ್ ಬಾರಿಸುವ ಮೂಲಕ ಶುಭ್ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ.
![](https://daijiworld.ap-south-1.linodeobjects.com/Linode/img_tv247/gil.jpg)
ಭರ್ಜರಿ ಫಾರ್ಮ್ ನಲ್ಲಿರುವ ಗುಜರಾತ್ ಟೈಟಾನ್ಸ್ ಆಟಗಾರ ಶುಭ್ಮನ್ ಗಿಲ್ ಅವರು ಸತತ ಶತಕ ಬಾರಿಸಿ ಮಿಂಚುತ್ತಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಕರ್ಷಕ ರೀತಿಯಲ್ಲಿ ಬ್ಯಾಟ್ ಬೀಸಿದ ಗಿಲ್ ಆರೆಂಜ್ ಕ್ಯಾಪ್ ಹೋಲ್ಡರ್ ಎನಿಸಿಕೊಂಡಿದ್ದಾರೆ.
60 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್ ಗಳನ್ನು ಒಳಗೊಂಡ ಇನ್ನಿಂಗ್ಸ್ ನಲ್ಲಿ 129 ರನ್ ಗಳಿಸಿದರು. ಗಿಲ್ ಟಿ20 ವೇಗದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ ಎಂಬ ಟೀಕೆಗಳಿಗೆ ಗಿಲ್ ಉತ್ತರಿಸಿದ್ದು, ಈ ಋತುವಿನಲ್ಲಿ ಅವರು ತಮ್ಮ ಸ್ಟ್ರೈಕ್ ರೇಟ್ ಆಟವನ್ನು ಹೆಚ್ಚಿಸಿದ್ದಾರೆ.
ಇನ್ನೂ,ಗಿಲ್ ಈ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (730 ರನ್) ಅವರನ್ನು ಹಿಂದಿಕ್ಕಿದರು. ಈಗ ಅವರು 16 ಪಂದ್ಯಗಳಿಂದ 851 ರನ್ ಗಳನ್ನು ಗಳಿಸಿದ್ದಾರೆ. ಯಾರೂ ಅವರ ರನ್ ಹತ್ತಿರವೂ ಇರದ ಕಾರಣ ಗಿಲ್ ಈ ಕೂಟದ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಪ್ರಶಸ್ತಿ ಪಡೆಯುವುದು ಖಚಿತ.
2016ರಲ್ಲಿ ವಿರಾಟ್ ಕೊಹ್ಲಿ ಅವರು 973 ಗಳಿಸಿದ್ದರು. ಆ ವರ್ಷ ವಿರಾಟ್ 16 ಇನ್ನಿಂಗ್ಸ್ ಗಳಲ್ಲಿ 81ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು. ಇದೀಗ ವಿರಾಟ್ ಈ ದಾಖಲೆಯ ಹತ್ತಿರ ಬಂದಿದ್ದಾರೆ. ಒಂದು ವೇಳೆ ಗಿಲ್ ಕ್ವಾಲಿಫೈಯರ್ ಎರಡರ ಇನ್ನಿಂಗ್ಸ್ ಪುನಾರವರ್ತಿಸಿದರೆ ಕೊಹ್ಲಿ ದಾಖಲೆ ಮುರಿಯಬಹುದು.