ನವದೆಹಲಿ, ಮೇ 25(DaijiworldNews/MS): ದೆಹಲಿಯಲ್ಲಿ ಜೋರಾದ ಸಚಿವ ಸಂಪುಟ ಕಸರತ್ತು ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಡಿಕೆಶಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಸಚಿವರಾದವರು ಪ್ರಬಲ ಖಾತೆ ಪಡೆಯಲು ಹಾಗೂ ಶಾಸಕರು ಸಚಿವ ಸ್ಥಾನದ ಪದವಿ ಪಡೆಯಲು ವರಿಷ್ಠರ ಮುಂದೆ ಲಾಬಿ ನಡೆಸುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಗೆ ತೆರಳಿದ್ದಾರೆ. ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಈಗ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಸಂಪುಟದಲ್ಲಿ ಮೇಲು’ಗೈ’ ಸಾಧಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ
ಜಿಲ್ಲೆ, ಪ್ರದೇಶ, ಜಾತಿವಾರು ಪ್ರಾತಿನಿಧ್ಯ ಕಲ್ಪಿಸಿ ಸೈ ಎನಿಸಿಕೊಳ್ಳಬೇಕೆಂಬುದು ಹೈಕಮಾಂಡ್ ಆಶಯ. ಇದೀಗ ಈ ಲೆಕ್ಕಾಚಾರ ತಪ್ಪುವಂತೆ ಕಾಣಿಸಲು ಆರಂಭವಾಗಿದೆ. ಒಟ್ಟಾರೆ ಇಂದು ಇಡೀ ದಿನ ಸಚಿವರ ಪಟ್ಟಿ ಫೈನಲ್ಗೊಳಿಸಲು ನಾಯಕರ ಕಸರತ್ತು ಮುಂದುವರಿಯಲಿದೆ.