ನ್ಯೂಯಾರ್ಕ್, ಮೇ 12 (DaijiworldNews/HR): ಟ್ವಿಟ್ಟರ್ಗೆ ನೂತನ ಸಿಇಒ ನೇಮಕ ಮಾಡಿರುವುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr120523-musk.jpg)
ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಟ್ವಿಟರ್ಗೆ ಹೊಸ ಸಿಇಒ ನೇಮಕ ಮಾಡಿದ್ದೇನೆ ಎಂದು ಘೋಷಿಸಲು ನಾನು ಖುಷಿಪಡುತ್ತೇನೆ. ಆರು ವಾರದೊಳಗೆ ಅವರು ಹುದ್ದೆಯನ್ನು ಅಲಂಕರಿಸಲಿದ್ದಾರೆ. ಟ್ವಿಟರ್ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ಎನ್ಬಿಸಿ ಯುನಿವರ್ಸಲ್ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟರ್ನ ಹೊಸ ಸಿಇಒ ಆಗಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.