ಇಸ್ಲಾಮಾಬಾದ್, ಮೇ 02 (DaijiworldNews/MS): ಕುಖ್ಯಾತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ಸಂಘಟನೆ ಕಮಾಂಡರ್, ಅಬ್ದುಲ್ ಜಬರ್ ಷಾನನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
![](https://daijiworld.ap-south-1.linodeobjects.com/Linode/img_tv247/ms-210921-terror.jpg)
ಪಾಕ್ ನ ಕಾನೂನು ಜಾರಿ ಸಂಸ್ಥೆಗಳು ಮತ್ತು ಪೋಲಿಯೊ ಲಸಿಕೆ ನೀಡುವ ತಂಡಗಳು ಮೇಲೆ ದಾಳಿ ಸೇರಿ ಅನೆಕ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಬರ್ ಷಾನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ದಕ್ಷಿಣ ವಜೀರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಗ್ರಾಮದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿಭದ್ರತಾ ಪಡೆಗಳು ನಿಷೇಧಿತ ಟಿಟಿಪಿ ಗುಂಪಿನ ನಾಯಕ ಅಬ್ದುಲ್ ಜಬರ್ ಷಾನನ್ನ್ಯ್ ಹತ್ಯೆ ಮಾಡಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಟಿಟಿಪಿ ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳನ್ನು ಹೆಚ್ಚಿಸಿದ್ದು, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಈ ಸಂಘಟನೆ ಮತ್ತಷ್ಟು ಪ್ರಬಲಗೊಂಡಿದೆ.