ಸಿಡ್ನಿ, ಏ 10 (DaijiworldNews/HR): ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಕೊಡಗಿನ ಕುವರಿ ಚರಿಶ್ಮಾ ಅವರು ಭಾರೀ ಅಂತರದಲ್ಲಿ ಜಯಗಳಿಸಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-100423-sidni.jpg)
ಚರಿಶ್ಮಾ ಅವರು ಕೊಳಕೇರಿಯವರಾದ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಅವರ ಪುತ್ರಿಯಾಗಿದ್ದಾರೆ.
ಇನ್ನು 35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.