ಮಂಗಳೂರು,ಮಾ20(AZM):ವಿಭಿನ್ನ ರೀತಿಯಲ್ಲಿ ಪ್ರೇಮಕಥೆಯನ್ನು ಹೆಣದಿರುವ ಮಂಕುಭಾಯಿ ಫಾಕ್ಸಿ ರಾಣಿ ಕನ್ನಡ ಚಲನಚಿತ್ರದ ಎರಡನೇ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_200319_manku1 copy.jpg)
ಸಿನಿಮಾ ಎಂಬ ಮಾಯಾ ಜಗತ್ತಿಗೆ ಇದೀಗ ಕರಾವಳಿಯ ಹುಡುಗರೂ ಇಳಿದಿದ್ದಾರೆ. ಹಲವಾರು ಕನಸುಗಳನ್ನು ಕಟ್ಟಿ ನಾಯಕ,ನಾಯಕಿ ನಿರ್ದೇಶಕನಾಗಬೇಕು ಎಂದು ಸಿನಿಮಾ ಜಗತ್ತಿಗೆ ಇಳಿದ ಯುವ ತಂಡಕ್ಕೆ ಖಂಡಿತವಾಗಿಯೂ ನಾವೆಲ್ಲರೂ ಪ್ರೋತ್ಸಾಹ ನೀಡಲೇ ಬೇಕಿದೆ. ನಮ್ಮ ಕರಾವಳಿಯ ಹುಡುಗ ಗೀತೇಶ್ ಮಾಡೂರುರವರು ವಿಭಿನ್ನ ರೀತಿಯಲ್ಲಿ ಹೆಣದಿರುವ ಈ ಪ್ರೇಮಕಥೆಗೆ ಸ್ವಲ್ಪ ವಿಭಿನ್ನ ರೀತಿಯಲ್ಲೇ ಹೆಸರನ್ನು ಇಟ್ಟಿದ್ದಾರೆ. ಮಂಕುಭಾಯಿ ಫಾಕ್ಸ್ತಿ ರಾಣಿ ಹೆಸರಿನಂತೆ ಸಸ್ಪೆನ್ಸ್ ತ್ರಿಲ್ಲರ್ ಪ್ರೇಮಕಥೆಯಾಗಿದೆ. ಜೊತೆಗೆ ವೀಕ್ಷಕರನ್ನು ನಗಿಸಲು ಸಾಕಷ್ಟು ಹಾಸ್ಯವೂ ಇದೆ ಎನ್ನಲಾಗಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_200319_manku11 copy.jpg)
ಚಿತ್ರದಲ್ಲಿ ಹೆಚ್ಚಾಗಿ ಹಳ್ಳಿಯ ದೃಶ್ಯಗಳೇ ಕಂಡುಬರುವುದರಿಂದ ವಿಟ್ಲ ಭಾಗದಲ್ಲಿ ಚಿತ್ರೀಕರಣ ನಡೆಸಿದ್ದು, ಚಿತ್ರದಲ್ಲಿ ಪೂರ್ತಿಯಾಗಿ ಮಂಗಳೂರು ಕನ್ನಡವನ್ನು ಬಳಸಲಾಗಿದೆ ಎನ್ನಲಾಗಿದೆ. ಇನ್ನು ಚಿತ್ರದಲ್ಲಿ ನಾಯಕನ ಪಾತ್ರ ಮುಗ್ಧವಾಗಿದ್ದು, ನಾಯಕಿ ಸ್ವಲ್ಪ ಕನ್ನಿಂಗ್ ಆಗಿರುತ್ತಾಳೆ. ಹಾಗಾಗಿ ಚಿತ್ರಕ್ಕೆ ಮಂಕುಭಾಯಿ ಫಾಕ್ಸಿ ರಾಣಿ ಎಂದು ಹೆಸರಿಡಲಾಗಿದೆ ಎಂದು ಚಿತ್ರದ ನಿರ್ದೇಶಕ ಗೀತೇಶ್ ಹೇಳಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_200319_mankuuuu copy.jpg)
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್ ಹಾಗೂ ಪಂಚಮಿ ರಾವ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಹಾಸ್ಯ ಪಾತ್ರದಲ್ಲಿ ಪ್ರಕಾಶ್ ತೂಮಿನಾಡ್ ಅಭಿನಯಿಸಿದ್ದಾರೆ. 2 ಘಂಟೆಯ ಈ ಚಿತ್ರದಲ್ಲಿ 5 ಹಾಡುಗಳಿವೆ.
ಏನೇ ಆಗಲಿ, ಕಿರಿ ವಯಸ್ಸಿನಲ್ಲೇ ಹಲವಾರು ಕನಸಗಳನ್ನು ಹೊತ್ತು ಚಿತ್ರವನ್ನು ನಿರ್ದೇಶಿಸಿರುವ ಗೀತೇಶ್ ಅವರ ಕನಸುಗಳು ನನಸಾಗಲಿ ಹಾಗೂ ಅವರ ಚೊಚ್ಚಲ ಚಿತ್ರ ಸಿನಿಮಾ ಪ್ರಿಯರ ಮನಸ್ಸಿನಲ್ಲಿ ನೆಲೆಯೂರಲಿ ಎಂದು ಹಾರೈಸುವ.