ಮಿನ್ಸ್ಕ್ (ಬೆಲಾರಸ್), ಮಾ 03 (DaijiworldNews/DB): 2022ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನ್ಯಾಯವಾದಿ ಅಲೆಸ್ ಬಿಯಾಲಿಯಾಟ್ಸ್ಕಿ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಲಾರಸ್ ನ್ಯಾಯಾಲಯ ತೀರ್ಪು ನೀಡಿದೆ.
![](https://daijiworld.ap-south-1.linodeobjects.com/Linode/img_tv247/DB-10032023-alesa.jpg)
ಸರ್ಕಾರದ ವಿರುದ್ದ ಪ್ರತಿಭಟಿಸಲು ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಅಲೆಸ್ ಹಾಗೂ ಅವರ ಮೂವರು ಸಹೋದ್ಯೋಗಿಗಳು ತಪ್ಪತಸ್ಥರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ಜೈಲು ಶಿಕ್ಷೆಯ ತೀರ್ಪು ನೀಡಿದೆ.
ಸರ್ವಾಧಿಕಾರಿ ಅಲೆಕ್ಸಾಂಡರ್ ಲುಕಶೆಂಕೊ ಅವರು 2020ರ ಚುನಾವಣೆಯಲ್ಲಿ ಮತ್ತೊಮ್ಮೆ ಬೆಲಾರಸ್ನ ಅಧ್ಯಕ್ಷ ಗಾದಿಗೆ ಏರಿದ್ದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣದಲ್ಲಿ 'ವಯಸ್ನಾ ಮಾನವ ಹಕ್ಕು ಕೇಂದ್ರ'ದ ಸ್ಥಾಪಕ ಅಲೆಸ್ ಹಾಗೂ ಇತರ ಮೂವರು ಸಹೋದ್ಯೋಗಿಗಳು ಬಂಧಿತರಾಗಿದ್ದರು. ತಮ್ಮ ಸಂಘಟನೆಯ ಹಣವನ್ನು ರಾಜಕೀಯ ಕೈದಿಗಳ ಕಾನೂನು ಪ್ರಕ್ರಿಯೆಗಳಿಗಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.