ಮಂಗಳೂರು, ಫೆ 13 (DaijiworldNews/HR): 'ಜೈಲರ್' ಸಿನಿಮಾದ ಶೂಟಿಂಗ್ಗಾಗಿ ಸೂಪರ್ ಸ್ಟಾರ್ ರಜನಿಕಾಂತ್, ಶಿವರಾಜ್ ಕುಮಾರ್ ಮಂಗಳೂರಿಗೆ ಆಗಮಿಸಿದದು, ಕರಾವಳಿಯಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
![](https://daijiworld.ap-south-1.linodeobjects.com/Linode/img_tv247/hr-13.02.23-film.jpg)
ನೆಲ್ಸನ್ ದಿಲೀಪ್ ಕುಮಾರ್ ಅವರ 'ಜೈಲರ್' ಸಿನಿಮಾದ ಶೂಟಿಂಗ್ ಗಾಗಿ ರಜನಿಕಾಂತ್ ಮಂಗಳೂರಿಗೆ ಆಗಮಿಸಿದ್ದು, ಪಿಲಿಕುಳ ಗುತ್ತು ಮನೆಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನು ರಜನಿಕಾಂತ್ ಅವರು ಮುತ್ತುವೇಲ್ ಪಾಂಡಿಯನ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟೀಸರ್ ವೈರಲ್ ಆಗಿದೆ.
'ಜೈಲರ್' ತಲೈವಾ ರಜನಿಕಾಂತ್ ಅವರ 169ನೇ ಸಿನಿಮಾ ಆಗಿದ್ದು, ಇದ್ರಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.