ಮುಂಬೈ, ಜ 20 (DaijiworldNews/HR): ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಸಾಂಪ್ರದಾಯಿಕ ಕಾರ್ಯಕ್ರಮ ಜನವರಿ 19ರ ಗುರುವಾರ ಮುಂಬಯಿನಲ್ಲಿನ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ನಡೆಯಿತು.
![](https://daijiworld.ap-south-1.linodeobjects.com/Linode/img_tv247/hr-200123-en.jpg)
ಗುಜರಾತಿ ಹಿಂದೂ ಕುಟುಂಬಗಳಲ್ಲಿ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.
ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ ಮುಂಚಿನ ಸಮಾರಂಭವಾಗಿದು, ದೆ. ಇದು ನಿಶ್ಚಿತಾರ್ಥವನ್ನು ಹೋಲುತ್ತದೆ. ಈ ಸಮಾರಂಭ ನಡೆಯುವ ವರನ ಸ್ಥಳದಲ್ಲಿ ಈ ವಸ್ತುಗಳನ್ನು ವಿತರಿಸಲಾಗುತ್ತದೆ. ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಬರುತ್ತದೆ.
ನೀತಾ ಮತ್ತು ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಜಿಯೋ ಪ್ಲಾಟ್ಫಾರ್ಮ್ಗಳು ಮತ್ತು ರಿಲಯನ್ಸ್ ರೀಟೇಲ್ ವೆಂಚರ್ಸ್ನ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.