ಜೈಪುರ, ನ 24 (DaijiworldNews/DB): ಅಂತರ್ಧರ್ಮೀಯ ವಿವಾಹವಾಗಿದ್ದ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ ಘಟನೆ ಜೈಪುರದ ಲಕ್ಷ್ಮಿ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಜಲಿ ವರ್ಮಾ ಎಂಬಾಕೆಯನ್ನು ಹತ್ಯೆಗೈಯಲು ಯತ್ನಿಸಲಾಗಿದೆ. ನವೆಂಬರ್ 23ರಂದು ಘಟನೆ ನಡೆದಿದೆ. ಆಕೆಯ ಪತಿಯ ಸಹೋದರ ಅಬ್ದುಲ್ ಅಜೀಜ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಹತ್ಯೆಗೈಯಲು ಯತ್ನಿಸಿದ್ದ. ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆ ಮೇರೆಗೆ ಅಬ್ದುಲ್ ಅಜೀಜ್ ಮತ್ತು ಆತನ ಸ್ನೇಹಿತರಾದ ಮೊಹಮ್ಮದ್ ರಾಜ, ರಾಜು, ಶೂಟರ್ ಕಲೀಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಲೀಮ್ನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ಅಬಿದ್ ಎಂಬಾತನಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ವಂದಿತಾ ರಾಣ ಹೇಳಿದ್ದಾರೆ.