ಬೆಂಗಳೂರು, ನ 24 (DaijiworldNews/MS): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ʻಮಾನ್ಯ ಸಿದ್ದರಾಮಯ್ಯ ಹಿಂದುಳಿದ ವರ್ಗದವರ ಮುಂದೆ ʻಅಲ್ಪʼರಾಗಿದ್ದಾರೆ. ನಾನು ಅಹಿಂದ ನಾಯಕ ಎನ್ನುತ್ತಾ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯೂ ಆದರು. ಆದರೆ, ಈಗ ಹಿಂದುಳಿದ ವರ್ಗ ನೆನಪಾಗುತ್ತಿಲ್ಲವಂತೆ. ಬದಲಿಗೆ ತಾವು ಮೇಲೇರಲು ಏಣಿಯಂತೆ ಬಳಸಿಕೊಂಡ ಹಿಂದುಳಿದವರನ್ನು ಒದೆಯುತ್ತಿದ್ದಾರೆ. ಇನ್ನೆಷ್ಟು ವರ್ಷ ಸಹಿಸಬೇಕು ಈ ದರ್ಪವನ್ನು?ʼ ಎಂದು ಪ್ರಶ್ನಿಸಿದೆ
ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟೈಂ ಸರಿ ಇಲ್ಲ. ಅವರು ಈ ಸಲ ಗೆಲ್ಲಲೇಬಾರದು ಅಂತ ಅವರ ಪಂಚೆ, ಕಾಲು ಎಳೆಯೋ ‘ಕೈ’ಗಳು ಜಾಸ್ತಿಯಾಗ್ತಿವೆ. ಸ್ವತಃ ಡಿಕೆ ಶಿವಕುಮಾರ್ ಆಪ್ತ ಶ್ರೀನಿವಾಸ್, ಕೆ.ಎಚ್.ಮುನಿಯಪ್ಪನವರೇ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ ಅಂದ್ರೆ, ಕೋಲಾರದಲ್ಲೂ ಸಿದ್ದರಾಮಯ್ಯನವರಿಗೆ ಖೆಡ್ಡಾ ರೆಡಿಯಾಗಿದೆ ಎಂಬುದು ಖಾತ್ರಿಯಾದಂತೆ ಎಂದು ವ್ಯಂಗ್ಯವಾಡಿದೆ.