ಜಮ್ಮು, ನ 24 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುಲ್ಲಿ ಡ್ರೋನ್ನಿಂದ ಬೀಳಿಸಲಾದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್ಗಳು ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಡ್ರೋನ್ ಮೂಲಕ ಸರಕು ರವಾನೆ ಮಾಡುತ್ತಿರುವುದನ್ನು ಸ್ಥಳೀಯ ಜನರು ನೋಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಾಂಬ್ ನಿಷ್ಕ್ರಿಯ ದಳವು ಡಿಟೋನೇಟರ್ಗಳೊಂದಿಗೆ ಜೋಡಿಸದ ಎರಡು ಐಇಡಿಗಳು, ಎರಡು ಚೈನೀಸ್ ಪಿಸ್ತೂಲ್ಗಳು, 60 ರೌಂಡ್ಗಳ 4 ಮ್ಯಾಗಜೀನ್ಗಳು ಮತ್ತು 500 ರೂ. ಮುಖಬೆಲೆಯ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.