ಮೆಲ್ಬೋರ್ನ್, ನ 06 (DaijiworldNews/DB): ಟಿ20 ವಿಶ್ವಕಪ್'ನಲ್ಲಿ ಜಿಂಬಾಬ್ವೆ ತಂಡವನ್ನು ಮಣಿಸಿ ಭಾರತ ಕ್ರಿಕೆಟ್ ತಂಡ ಸೆಮಿಫೈನಲ್ಗೆ ಎಂಟ್ರಿಯಾಗಿದೆ. ಜಿಂಬಾಬ್ವೆ ವಿರುದ್ದ ಭಾರತಕ್ಕೆ 71 ರನ್ಗಳ ಜಯ ಸಿಕ್ಕಿದೆ.
![](https://daijiworld.ap-south-1.linodeobjects.com/Linode/img_tv247/DB-14112022-ind.jpg)
ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚಿಸಿತ್ತು. ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದಿಂದಾಗಿ ಭಾರತ ಸ್ಕೋರ್ಬೋರ್ಡ್ನಲ್ಲಿ 186 ರನ್ ಗಳಿಸಿ ಹೆಚ್ಚಿನ ಅಂಕದೊಂದಿಗೆ ಸೆಮಿಫೈನಲ್ಗೇರಲು ಸಾಧ್ಯವಾಯಿತು. ಜಿಂಬಾಬ್ವೆ ತಂಡ ಕೇವಲ 115 ರನ್ಗಳಿಗೆ ಆಲೌಟ್ ಆಯಿತು.
ಟಿ20 ವಿಶ್ವಕಪ್'ನಲ್ಲಿ ಈಗಾಗಲೇ ಭಾರತ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಆ ಮೂಲಕ ಸೆಮಿಫೈನಲ್ಗೇರುವ ತನ್ನ ಕನಸನ್ನು ನನಸು ಮಾಡಿಕೊಂಡಿದೆ.