ನವದೆಹಲಿ, ಸೆ 23 (DaijiworldNews/HR): ದ್ವೇಷದ ಅಪರಾಧಗಳ ಕುರಿತು ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಜಾಗರೂಕರಾಗಿರಿ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಸೆ. 19 ರಂದು ಒಂಟಾರಿಯೊದ ಬ್ರಾಂಪ್ಟನ್'ನಲ್ಲಿ ಖಲಿಸ್ತಾನ ಪರ ಗುಂಪು ಸಿಖ್ಸ್ ಫಾರ್ ಜಸ್ಟೀಸ್ ಆಯೋಜಿಸಿದ್ದ ಜನಮತಗಣನೆಗೆ 100,000ಕ್ಕೂ ಹೆಚ್ಚು ಕೆನಡಿಯನ್ ಸಿಖ್ಖರು ಮತದಾನದಲ್ಲಿ ಭಾಗವಹಿಸಿದ ನಂತರ ಕೇಂದ್ರ ಈ ಸಲಹೆ ನೀಡಿದೆ.
ಇನ್ನು ದೇಶದಲ್ಲಿ ಬೆಳೆಯುತ್ತಿರುವ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಭಾರತ ಸರ್ಕಾರವು ಕೆನಡಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಕೆನಡಾ ಸರ್ಕಾರವು ಖಲಿಸ್ತಾನ್ ಜನಮತಗಣನೆಯನ್ನ ನಡೆಸುವ ಮೂಲಕ ಮತ್ತು ದೇಶದ ಕಾನೂನುಗಳ ಕಾನೂನು ಮಾನದಂಡಗಳೊಳಗೆ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯೊಂದಿಗೆ ಅದನ್ನ ಜೋಡಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುವುದನ್ನು ತಡೆಯಲು ನಿರಾಕರಿಸಿದೆ.