ಅಕ್ಲೇಂಡ್ ಫೆ8(SB): ನ್ಯೂಜಿಲೇಂಡ್ ವಿರುದ್ಧ ನಡೆದ ಮೊದಲ T20 ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಂಡ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಜಯಭೇರಿ ಗಳಿಸಿದೆ.
ಇಂದು ಅಕ್ಲೇಂಡ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತವು ನ್ಯೂಜಿಲೇಂಡ್ ತಂಡವನ್ನು ಏಳು ವಿಕೆಟ್ ಗಳ ಅಂತರದಿಂದ ಪರಾಭವಗೊಳಿಸಿತು. ನ್ಯೂಜಿಲೇಂಡ್ ಒಡ್ಡಿದ 159 ರನ್ ಗಳ ಸವಾಲನ್ನು ಸುಲಭವಾಗಿ ಬೆನ್ನಟ್ಟಿದ ಭಾರತ ತಂಡದ ದಾಂಡಿಗರು ಏಳು ಬಾಲ್ ಗಳು ಬಾಕಿ ಇರುವಂತೆ ಮೂರು ವಿಕೆಟ್ ಗಳ ನಷ್ಟಕ್ಕೆ ಗುರಿ ತಲುಪಿದರು.
![](https://daijiworld.ap-south-1.linodeobjects.com/iWeb/tvdaijiworld/img_tv247/cricket1.jpg)
ಈ ಜಯದೊಂದಿಗೆ ಸರಣಿಯಲ್ಲಿ ಇತ್ತಂಡಗಳು 1-1 ರ ಸಮಬಲ ಸಾಧಿಸಿದುವು. ಭಾನುವಾರ ನಡೆಯಲಿರುವ ಮೂರನೇ ಪಂದ್ಯವು ವಿಜಯಿಯನ್ನು ನಿರ್ಧರಿಸಲಿದೆ.
ಸ್ಕೋರ್: ನ್ಯೂಜಿಲೇಂಡ್ 158/8, ಭಾರತ 159/3